ರಾಜ್ಯದಲ್ಲಿಘೋಷಣೆಯಾಗಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ, ಅರ್ಹ ಶಿಕ್ಷಕರು ತಮ್ಮ ಪ್ರಜ್ಞಾವಂತ ಮತವನ್ನು ಮಾರಾಟ ಮಾಡಿಕೊಳ್ಳದೆ, ಮತಾಧಿಕಾರ ಚಲಾಯಿಸಬೇಕು.ವಿದ್ಯಾವಂತ ಶಿಕ್ಷಕರು, ನೌಕರರು ನಮ್ಮ ಸಮಾಜದ ಉಳಿವಿಗಾಗಿ, ಸಂವಿಧಾನದ ಗುರಿ, ಉದ್ದೇಶಗಳ ಯಶಸ್ವಿಗಾಗಿ ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಈ ದೇಶಕ್ಕೂ, ಮೋಸ ಮಾಡದ ರೀತಿಯಲ್ಲಿಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ.
ನಮ್ಮ ಅಂದಿನ ಓದಿನ ಶ್ರಮ, ನಮ್ಮ ತಂದೆ ತಾಯಿ ಸುರಿಸಿದ ಬೆವರು ಹನಿಯ ಶ್ರಮ ಹಾಗೂ ನಮ್ಮ ಮೇಲೆ ನಂಬಿಕೆ ಇಟ್ಟ ನಮ್ಮ ಸಮಾಜದ ನಂಬಿಕೆಗೆ ಇಂದು ಬೆಲೆ ಕಟ್ಟಲು ಸಾಧ್ಯವೇ? ಹಾಗಾದರೆ ಇಂದಿನ ರಾಜಕಾರಣಿಗಳು ಹೇಗೆ ನಮ್ಮ ಮತಗಳಿಗೆ ಬೆಲೆ ನಿರ್ಧರಿಸುತ್ತಿದ್ದಾರೆ? ಇಂದು ನಮ್ಮ ಮತಗಳಿಗೆ ರಾಜಕಾರಣಿಗಳು ಬೆಲೆ ಕಟ್ಟಲು ಸಾಧ್ಯವೇ? ಈ ದೇಶದಲ್ಲಿರಾಜಕಾರಣಿಗಳನ್ನು ಸೃಷ್ಟಿ ಮಾಡುವ, ನಾಯಕರನ್ನು ಸೃಷ್ಟಿಸುವ ಏಕೈಕ ಮಹಾನ್ ಹುದ್ದೆ ಎಂದರೆ ಅದು ಶಿಕ್ಷಕ ಹುದ್ದೆ. ಹೀಗಿರುವಾಗ ಶಿಕ್ಷಕರ ಮತಗಳಿಗೆ ಬೆಲೆ ಕಟ್ಟಲು ಹೊರಟಿರುವ ಹಾಗೂ ಬೆಲೆಕಟ್ಟಿಸಿಕೊಳ್ಳುತ್ತಿರುವ ನಾವು, ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಶಿಕ್ಷಕರು ಜ್ಞಾನ ಮಾರಾಟ ಮಾಡುವುದಿಲ್ಲಹಾಗೆಯೇ ತಮ್ಮ ಮತವನ್ನೂ ಮಾರಾಟ ಮಾಡಬಾರದು. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಮತವು ಶಿಕ್ಷಣ ಕ್ಷೇತ್ರದ ಭವಿಷ್ಯ ನಿರ್ಧರಿಸುವ ಶಕ್ತಿಯಾಗಿದೆ. ಆದ್ದರಿಂದ ಮತವನ್ನು ವಿವೇಕದಿಂದ, ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ಚಲಾಯಿಸಿ, ಪ್ರಜಾಪ್ರಭುತ್ವಗೆಲ್ಲಿಸೋಣ.