10 ದಿನ ದಸರಾ ಲೈಟಿಂಗ್ ಮುಂದುವರಿಕೆ: ಸಿಎಂ

Contributed by: KENCHE GOWDA|Vijaya Karnataka•
10 days of dasara festival lighting continued cm dk shivakumar
ವಿಕ ಸುದ್ದಿಲೋಕ ಬೆಂಗಳೂರು

ಮೈಸೂರಿನಲ್ಲಿಜನಾಕರ್ಷಣೆಯ ದಸರಾ ದೀಪಾಲಂಕಾರವನ್ನು 10 ದಿನಗಳ ಕಾಲ ಮುಂದುವರಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧ ಕಚೇರಿಯಲ್ಲಿವಿಜಯದಶಮಿ ಅಂಗವಾಗಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘‘ದಸರಾ ಮಹೋತ್ಸವಕ್ಕೆ ವಿಜಯನಗರ ಕಾಲದಿಂದಲೂ ಇತಿಹಾಸವಿದೆ. ಕಂಬಳವನ್ನು ಕದರಿ ಮಂಜುನಾಥ ದೇವರಿಗಾಗಿ ಪ್ರಾರಂಭ ಮಾಡಲಾಗಿತ್ತು. ವಿಜಯನಗರ ಕಾಲದಲ್ಲೂಪದ್ಧತಿ ಇದೆ. ಕಂಬಳಕ್ಕೆ ಬಹುಮಾನವಾಗಿ ಚಿನ್ನದ ನಾಣ್ಯ ಕೊಡುವ ಪರಂಪರೆ ಇದೆ, ‘ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು, ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿಹೀಗೆ ರಾಜ್ಯದ ಎÇ್ಲಕಡೆ ದಸರಾ ನಡೆಯುತ್ತಿದೆ. ನಮ್ಮ ನಾಡಿನ ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನು ನಾವು ಮಾಡುತ್ತೇವೆ,’’ ಎಂದರು.

ಹೊಸ ಪರಂಪರೆ

‘‘ದಸರಾದಲ್ಲಿಕಂಬಳ ನಡೆಸುವ ಮೂಲಕ ಹೊಸ ಪರಂಪರೆ ಪ್ರಾರಂಭ ಮಾಡಿದ್ದೇವೆ. ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಕೋಣಗಳನ್ನು ಸಾಕಲು 15ರಿಂದ 20 ಲಕ್ಷ ಖರ್ಚು ಮಾಡಿ, ಮಕ್ಕಳಂತೆ ಪೋಷಣೆ ಮಾಡಿರುತ್ತಾರೆ. ಯುವ ದಸರಾ, ಏರ್ ಶೋ ಮೂಲಕ ಈ ಸಲ ದಸರಾ ಹೆಚ್ಚು ಜನರನ್ನು ಆಕರ್ಷಿಸಿದೆ,’’ ಎಂದು ಹೇಳಿದರು.

ಎಚ್ ಡಿಕೆ ಹೋರಾಟಕ್ಕೆ ಓಕೆ ಎಂದ್ರು ಸಿಎಂ

ದಸರಾ ಬಳಿಕ ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಲಿಲ್ಲ. ಆದರೆ, ಕೈಸನ್ನೆ ಮೂಲಕ ಆಗಬಹುದು ಎಂದರು.