ಕಾರಟಗಿ: ಪಟ್ಟಣದ ಹೊರವಲಯದ ದೇವಿಗುಡ್ಡದಲ್ಲಿರುವ ಶ್ರೀದೇವಿ ಬೀರೇಶ್ವರ ದೇವಸ್ಥಾನದಲ್ಲಿಶರನ್ನವರಾತ್ರಿ ನಿಮಿತ್ತ ಒಂಬತ್ತು ದಿನ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ಹಾಗೂಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೀರೇಶ್ವರ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿನಡೆಯುತ್ತಿರುವ ಉತ್ಸವವು ದಸರಾ ಸಂಭ್ರಮಕ್ಕೆ ಧಾರ್ಮಿಕ ಮೆರುಗು ನೀಡಲಿದೆ.
ಭಜನೆ, ಕೋಲಾಟದ ಸಂಭ್ರಮ : ಶ್ರೀದೇವಿ ಅಮ್ಮನವರ ಸನ್ನಿಧಿಗೆ ಮೆಟ್ಟಿಲು ಕಾರ್ಯಕ್ರಮ ನಡೆಯಲಿದೆ. ದಾಸ ಸಾಹಿತ್ಯ ಭಜನಾ ಮಂಡಳಿ, ದೇವಿ ಕ್ಯಾಂಪ್ ಹಾಗೂ ಹರೆ ಶ್ರೀನಿವಾಸ ಕೋಲಾಟದ ಭಕ್ತರು ಪಾಲ್ಗೊಳ್ಳಲಿದ್ದಾರೆ. ಶ್ರೀ ಸತೀಶ್ ರಾಮಾನುಜೀವನ ತಂಡದಿಂದ ಕೋಲಾಟ ನಡೆಯಲಿದೆ.
ವಿಶೇಷ ಪೂಜೆ: ಗಣಪತಿ ಪೂಜೆ, ಅಮ್ಮನವರಿಗೆ ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ನೆರವೇರಲಿದೆ. ಸಂಜೆ 5 ಗಂಟೆಯಿಂದ ಶ್ರೀಚಕ್ರಾರ್ಚನೆ, ಪ್ರದೋಷ ಪೂಜೆ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿಅಮ್ಮನವರ ಮೆರವಣಿಗೆ ನಡೆಯಲಿದೆ.
ದೇವಿ ದರ್ಶನ : ಗಾಯತ್ರಿ ದೇವಿ, ಬಾಲ ತ್ರಿಪುರ ಸುಂದರಿ, ಅನ್ನಪೂರ್ಣೇಶ್ವರಿ, ಲಲಿತಾ ಮಹಾ ತ್ರಿಪುರ ಸುಂದರಿ, ಸರಸ್ವತಿ, ಮಹಾಲಕ್ಷ್ಮಿ, ವನದುರ್ಗಾ, ಕಾಳಿ, ಮಹಿಷಾಸುರಮರ್ದಿನಿ ಹಾಗೂ ಮಹಾದುರ್ಗೆಯ ರೂಪಗಳಲ್ಲಿದೇವಿಯನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಉತ್ಸವದ ಕೊನೆಯ ದಿನ ರಾಜರಾಜೇಶ್ವರಿ ಅಲಂಕಾರದಲ್ಲಿದೇವಿಯ ದರ್ಶನದ ಬಳಿಕ ಶ್ರೀದೇವಿ ಅಮ್ಮನವರ