ಅಪರಾಧ ಸುದ್ದಿ

Contributed by: lakshmikanthakumar.boraiah@timesgroup.com|Vijaya Karnataka•
theft and fine crime news in shivamogga
ಕಳವು ಆರೋಪಿ ಬಂಧನ

ವಿಕ ಸುದ್ದಿಲೋಕ ಶಿವಮೊಗ್ಗ
ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿಬಂಧಿಸಿದ್ದಾರೆ.

ಭದ್ರಾವತಿ ತಮ್ಮಣ್ಣ ಕಾಲೊನಿಯ ಪ್ರೇಮ್ ಕುಮಾರ(19) ಬಂಧಿತ ಆರೋಪಿ. ಸ್ಥಳೀಯರಾದ ವಿಜಯ ಅವರ ಮನೆಯ ಬೀರುವಿನಲ್ಲಿಟ್ಟಿದ್ದ 4.80 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 4 ಉಂಗುರ ಕಳವು ಮಾಡಲಾಗಿತ್ತು. ವಿಜಯ ಅವರು ಮಗಳ ಮನೆಗೆ ಹೋಗಲೆಂದು ಅ.9ರಂದು ರಾತ್ರಿ ಒಡವೆಗಳ ಬಾಕ್ಸ್ ತೆಗೆದಾಗ ಆಭರಣಗಳ ಇರಲಿಲ್ಲ. ಈ ಸಂಬಂಧ ಹೊಸಮನೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿಆರೋಪಿಯನ್ನು ಬಂಧಿಸಿ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

===

ಮಗನ ತಪ್ಪಿಗೆ ತಾಯಿಗೆ ದಂಡ

ಮಗ ಸ್ಕೂಟರ್ ಚಲಾಯಿಸಿದ್ದಕ್ಕೆ ತಾಯಿಗೆ ದಂಡ

ಶಿವಮೊಗ್ಗ: ಬಾಲಕನಿಗೆ ಸ್ಕೂಟರ್ ಚಾಲನೆ ಮಾಡಲು ಅವಕಾಶ ನೀಡಿದ ಕಾರಣಕ್ಕಾಗಿ ಅತನ ತಾಯಿಗೆ 4ನೇ ಹೆಚ್ಚುವರಿ ಮುಖ್ಯ ನ್ಯಾಯಿಕ ಜೆಎಂಎಫ್ ನ್ಯಾಯಾಲಯ 26,500 ರೂ. ದಂಡ ವಿಧಿಸಿದೆ.

ನಗರದ ಆಲ್ಕೊಳ ವೃತ್ತದಲ್ಲಿಇತ್ತೀಚೆಗೆ ಬಾಲಕನೊಬ್ಬ ಸ್ಕೂಟರ್ ಚಾಲನೆ ಮಾಡುತ್ತಿರುವುದನ್ನು ಗುರುತಿಸಿದ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ತಡೆದು ಸ್ಕೂಟರ್ ಮಾಲೀಕತ್ವ ಹೊಂದಿದ್ದ ಆತನ ತಾಯಿಯ ವಿರುದ್ಧ ಲಘು ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು 26,500 ದಂಡ ವಿಧಿಸಿದೆ.