ದಸರಾಕ್ಕೆ ಮೆರುಗು ತಂದ ದಾಂಡಿಯಾ

Contributed by: hotiblhvk@gmail.com|Vijaya Karnataka•
dandiya festival that enriched the dussehra celebrations
ವಿಕ ಸುದ್ದಿಲೋಕ ಬೈಲಹೊಂಗಲ

ದಸರಾ ನಿಮಿತ್ತ ನಗರದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ರಸ್ತೆ ಬಳಿ ಆದರ್ಶ ಹಾಲಿಡೇಸ್ ವತಿಯಿಂದ ಆಯೋಜಿಸಿರುವ ದಾಂಡಿಯಾ ಮಹೋತ್ಸವ ಜನಮನ ಸೆಳೆಯುತ್ತಿದೆ.
ಮಹಿಳೆಯರು ಹಾಗೂ ಮಕ್ಕಳು ದಾಂಡಿಯಾ ಮತ್ತು ಗಾರ್ಭಾ ನೃತ್ಯ ಮಾಡುತ್ತ ಸಂಭ್ರಮಿಸುತ್ತಿದ್ದು, ಉತ್ಸವದ ವಾತಾವರಣ ಕಳೆಗಟ್ಟಿದೆ. ಪ್ರತಿದಿನ ನಡೆಯುತ್ತಿರುವ ಮಹೋತ್ಸವದಲ್ಲಿಬಣ್ಣಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ನೃತ್ಯಪ್ರಿಯರು, ಯುವತಿಯರು ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಸಾಂಪ್ರದಾಯಿಕ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ವೈಭವದ ಸಮ್ಮಿಲನವಾಗಿರುವ ಈ ಮಹೋತ್ಸವವು ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಆದರ್ಶ ಹಾಲಿಡೇಸ್ ನ ಆದರ್ಶ ಗುಂಡಗವಿ, ಶ್ರೀ ಚಿದಂಬರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯ ವೈದ್ಯ ಡಾ. ಸಾಗರ ಕುಲಕರ್ಣಿ, ಶ್ರೀಧರ ಗರಗ, ಪ್ರದೀಪ್ ಚುಳಕಿ, ಬಸವರಾಜ ಬಡಿಗೇರ, ವಿಶಾಲಗೌಡ ಪಾಟೀಲ, ಮಂಜುನಾಥ ಕಗ್ಗೋಡಿ, ಅರುಣ್ ಸಿಂಗ್ ಹಜೇರಿ, ಸಾಗರ ಇಟಗಿ, ಫೋಟೊಗ್ರಾಫರ್ ಬಸವರಾಜ ನರಟ್ಟಿ, ಸಂತೋಷ ಕಳ್ಳಿಮಠ ನೇತೃತ್ವದಲ್ಲಿಉತ್ಸವ ನಡೆಯುತ್ತಿದೆ.

ಫೋಟೊ: (17ಹೆಚ್ ಟಿಪಿ 8): ಬೈಲಹೊಂಗಲದಲ್ಲಿದಸರಾ ಹಬ್ಬಕ್ಕೆ ದಾಂಡಿಯಾ ನೃತ್ಯದ ಮೆರುಗು.