ಸ್ವರಚಿತ ಚುಟುಕುಗಳ ಸ್ಪರ್ಧೆ

Contributed by: shivakkanavar@gmail.com|Vijaya Karnataka•
voice based short poem competition at dist level in dharwad
ಸ್ವರಚಿತ ಚುಟುಕುಗಳ ಸ್ಪರ್ಧೆ

ಕುಂದಗೋಳ: ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನಿಂದ ಧಾರವಾಡ ಜಿಲ್ಲಾ ಮಟ್ಟದ ಸ್ವರಚಿತ ಚುಟುಕು ಸ್ಪರ್ಧೆ ಏರ್ಪಡಿಸಲಾಗಿದೆ. ಎಲ್ಲಿಯೂ ಪ್ರಕಟವಾಗದ, ಸ್ವರಚಿತ 5 ಚುಟುಕುಗಳನ್ನು (ಕವನ-ಕವಿತೆಗಳಿಗೆ ಅವಕಾಶವಿಲ್ಲ) ಅಂಚೆ ಅಥವಾ ವಾಟ್ಸ್ ಆ್ಯಪ್ ಮೂಲಕ ಕಳಿಸಬಹುದು. ಚುಟುಕು ಸಂಕಲನ ಹೊರತರುವ ಉದ್ದೇಶದಿಂದ ಚುಟುಕು ಕಳಿಸುವ ಕವಿಗಳು ತಮ್ಮ ಚುಟುಕುಗಳ ಜತೆಗೆ ಕಡ್ಡಾಯವಾಗಿ ತಮ್ಮ ಭಾವಚಿತ್ರ ಮತ್ತು ಸ್ವ-ವಿಳಾಸ ಹಾಗೂ ದೂರವಾಣಿ ಸಂಖ್ಯೆ ಲಗತ್ತಿಸಿರಬೇಕು. ಆಯ್ಕೆಯಾದ 5 ಕವಿಗಳ ಚುಟುಕುಗಳಿಗೆ ನವೆಂಬರ್ ನಲ್ಲಿಆಯೋಜಿಸುವ ನಮ್ಮ ಕಾರ್ಯಕ್ರಮವೊಂದರಲ್ಲಿಬಹುಮಾನ, ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಕವಿಗಳಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. ವೈ.ಡಿ.ಹೊಸೂರ, ಅಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮನದ ಬಿಂಬ ನಿವಾಸ, 1ನೇ ಅಡ್ಡರಸ್ತೆ, ಬಿಡನಾಳ ಪ್ಲಾಟ್ , ಲಕ್ಷ್ಮೇಶ್ವರ ರಸ್ತೆ, ಕುಂದಗೋಳ, ಅಥವಾ ವಾಟ್ಸ್ ಆ್ಯಪ್ ಮೂಲಕ ಗಣೇಶ ಏಸುಗಡೆ (ಉಪಾಧ್ಯಕ್ಷರು ಕಚುಸಾಪ) 99640 77552 ಹಾಗೂ ಗಂಗು ಸುತಾರ (ಸದಸ್ಯರು) 87223 02767 ಇವರಿಗೆ ಅ.25ರೊಳಗೆ ಕಳಿಸಲು ಕೋರಲಾಗಿದೆ.