ಕೊಪ್ಪಳ-ರಾಮೇಶ್ವರಕ್ಕೆ ಪಾದಯಾತ್ರೆ

Contributed by: shreekanta.akki@timesofindia.com|Vijaya Karnataka•
3rd pilgrimage from koppal to sri rameshwar
ರಾಮೇಶ್ವರಕ್ಕೆ ಪಾದಯಾತ್ರೆ

ವಿಕ ಸುದ್ದಿಲೋಕ ಕೊಪ್ಪಳ
ಲೋಕಕಲ್ಯಾಣದ ಸಂಕಲ್ಪದೊಂದಿಗೆ ನಗರದ ಹನುಮೇಶ ಕುಲಕರ್ಣಿ ಅವರು ಸೋಮವಾರ 3ನೇ ವರ್ಷದ ಪಾದಯಾತ್ರೆ ಆರಂಭಿಸಿದರು.

ಈ ಹಿಂದೆ ಉತ್ತರ ಭಾರತದ ಪವಿತ್ರ ಬದರಿನಾಥ ಹಾಗೂ ಕಾಶಿ ಶ್ರೀ ವಿಶ್ವನಾಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿಯಾತ್ರೆ ಪೂರ್ಣಗೊಳಿಸಿರುವ ಅವರು, ಇದೀಗ ದಕ್ಷಿಣ ಭಾರತದ ಪವಿತ್ರ ಕ್ಷೇತ್ರವಾದ ತಮಿಳುನಾಡಿನ ಶ್ರೀ ರಾಮೇಶ್ವರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆ ಆರಂಭಕ್ಕೂ ಮುನ್ನ ಕೊಪ್ಪಳದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್ ಮುಳಗುಂದ, ವ್ಯವಸ್ಥಾಪಕ ಜಗನ್ನಾಥ ಹುನಗುಂದ, ಕಲಾವಿದರಾದ ಬದರಿನಾಥ ಪುರೋಹಿತ, ಕೃಷ್ಣ ಸೊರಟೂರು, ನರಸಿಂಹ ಹುದ್ದಾರ, ರವಿ ಪಟವಾರಿ, ಬಲಭೀಮ ದೇಸಾಯಿ, ಮಧು ಕುಲಕರ್ಣಿ ಹಾಗೂ ಕುಟುಂಬದ ಸದಸ್ಯರು ಶುಭ ಹಾರೈಸಿ ಬೀಳ್ಕೊಟ್ಟರು.

* ಫೋಟೋ

12 ಕೆಪಿಎಲ್ ಫೋಟೋ 02

ಕೊಪ್ಪಳ ನಗರದ ಹನುಮೇಶ ಕುಲಕರ್ಣಿ ತಮ್ಮ 3ನೇ ಪಾದಯಾತ್ರೆ ಆರಂಭಿಸಿದರು.