ನವದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆ

Contributed by: chowlurmaheshgowda@gmail.com|Vijaya Karnataka•
navadurga idols installation navaratri celebration
ನವದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆ

----
ಹೊಸದುರ್ಗ: ಶ್ರೀದುರ್ಗಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದಲ್ಲಿದ್ವಿತೀಯ ಸಂಕಲ್ಪದ 9ನೇ ವರ್ಷದ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಹೊಸದುರ್ಗ ದಸರಾ ಉತ್ಸವಕ್ಕೆ ಭಕ್ತಿಭಾವದಿಂದ ಚಾಲನೆ ನೀಡಲಾಯಿತು.

ದುರ್ಗಾದೇವಿಯ ಒಂಬತ್ತು ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರ ಮೂರ್ತಿಗಳನ್ನು ಶಾಸ್ತೊ್ರೕಕ್ತ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಅಮ್ಮನವರಿಗೆ ವಿಶೇಷ ಅಭಿಷೇಕ, ಸಾಮೂಹಿಕ ಕೋಟಿ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ಒಂಬತ್ತು ದಿನಗಳ ಕಾಲ ನಡೆಯಲಿರುವ ಮಹೋತ್ಸವದಲ್ಲಿಹೋಮ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ. ನವರಾತ್ರಿ ಶಕ್ತಿ ಆರಾಧನೆಯ ಪ್ರಮುಖ ಹಬ್ಬವಾಗಿದ್ದು, ದುಷ್ಟಶಕ್ತಿಯ ವಿರುದ್ಧ ಒಳಿತಿನ ವಿಜಯವನ್ನು ಸಾರುತ್ತದೆ. ದೇವಿಯ ಒಂಬತ್ತು ಸ್ವರೂಪಗಳು ಶಕ್ತಿ, ಧೈರ್ಯ, ಜ್ಞಾನ ಮತ್ತು ಧರ್ಮದ ಸಂಕೇತಗಳಾಗಿವೆ. ಈ ಹಿನ್ನೆಲೆಯಲ್ಲಿನವದುರ್ಗೆಯರ ಪ್ರತಿಷ್ಠಾಪನೆ ಭಕ್ತರ ಗಮನ ಸೆಳೆಯಿತು. ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿರುವ ಮಹೋತ್ಸವವು ಪಟ್ಟಣದಲ್ಲಿಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿದುರ್ಗಾ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.

---

11ಎಚ. ಎಸ್ . ಡಿ4

ದುರ್ಗಾ ದೇವಿ