* 15ತಿಂಗಳ ಬಳಿಕ ಬಿಎಂಸಿಆರ್ ಸಿಯಲ್ಲಿರೆಡಿಯೋ ಥೆರಪಿ ಯಂತ್ರ ಕಾರ್ಯ
* 9ಕೋಟಿ ರೂ. ವೆಚ್ಚದಲ್ಲಿಖರೀದಿಸಿದ್ದ ರೆಡಿಯೋ ಥೆರಪಿ ಯಂತ್ರ ಕ್ಯಾನ್ಸರ್ ರೋಗಿಗಳಿಗೆ ತಪ್ಪಿದ ಅಲೆದಾಟ
ಮಾರುತಿ ಸುಣಗಾರ ಬಳ್ಳಾರಿ
ಗಣಿನಾಡಿನ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿಅತ್ಯಂತ ಪ್ರಮುಖ ಪಾತ್ರವಹಿಸುವ ರೆಡಿಯೋ ಥೆರಪಿ ಯಂತ್ರ 15ತಿಂಗಳ ಬಳಿಕ ಅಧಿಕೃತವಾಗಿ ಕಾರ್ಯನಿರ್ವಹಣೆ ಆರಂಭವಾಗಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದ ಕ್ಯಾನ್ಸರ್ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿಕ್ಯಾನ್ಸರ್ ವಿಭಾಗದಲ್ಲಿಚಿಕಿತ್ಸೆಯೊಂದಿಗೆ ರೆಡಿಯೋ ಥೆರಪಿ ಸೌಲಭ್ಯ ಕಲ್ಪಿಸಲಾಗಿದೆ. ಅದರಿಂದ ನಾನಾ ಬಗೆಯ ಕ್ಯಾನ್ಸರ್ ಗಳಿಗೆ ಇಲ್ಲಿನ ಬಿಎಂಸಿಆರ್ ಸಿ ನುರಿತ ತಜ್ಞ ವೈದ್ಯರಿಂದಲೂ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಆದರೆ, ಹಳೆಯದಾಗಿರುವ ರೆಡಿಯೋ ಥೆರಪಿ ಯಂತ್ರ ಪದೇ ಪದೆ ದುರಸ್ತಿಗೆ ಬರುತ್ತಿರುವ ಹಿನ್ನೆಲೆ ಅದಕ್ಕೆ ಪರ್ಯಾಯವಾಗಿ ಹೊಸ ಯಂತ್ರವನ್ನು ಕಳೆದ 15ತಿಂಗಳ ಹಿಂದೆ ಖರೀದಿಸಿ ಬಿಎಂಸಿಆರ್ ಸಿಯಲ್ಲಿಇಡಲಾಗಿತ್ತು. ಅಂದಿನಿಂದ ಈವರೆಗೂ ಯಂತ್ರ ಅಳವಡಿಕೆಗೆ ನಾನಾ ತಾಂತ್ರಿಕ ತೊಂದರೆ ಹಿನ್ನೆಲೆ ಕ್ಯಾನ್ಸರ್ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ನೂತನ ಯಂತ್ರ ಅಳವಡಿಕೆಯಾಗಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಹೀಗಾಗಿ, ಬಿಎಂಸಿಆರ್ ಸಿಯಲ್ಲಿರೆಡಿಯೋ ಥೆರಪಿ ಯಂತ್ರದ ಮೂಲಕ ಪರೀಕ್ಷೆಗೆ ಹಸಿರು ನಿಶಾನೆ ದೊರೆತಿದ್ದು, ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಚಿಕಿತ್ಸೆ ದೊರಕಲು ಅವಕಾಶ ದೊರೆಕಿದಂತಾಗಿದೆ.
* 9ಕೋಟಿ ರೂ. ವೆಚ್ಚದ ಯಂತ್ರ: ಬಿಎಂಸಿಆರ್ ಸಿಯಲ್ಲಿಅತ್ಯಾಧುನಿಕ ತಂತ್ರಜ್ಞಾನವುಳ್ಳ ರೆಡಿಯೋ ಥೆರಪಿ ಯಂತ್ರ ಖರೀದಿಗಾಗಿ 9 ಕೋಟಿ ರೂ. ವ್ಯಯಿಸಲಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ರೆಡಿಯೋ ಥೆರಪಿ ಚಿಕಿತ್ಸೆ ಅತ್ಯವಶ್ಯವಾಗಿದ್ದು, ಗ್ರಂಥಿಗೆ ಸಂಬಂಧಿಸಿದ ಕ್ಯಾನ್ಸರ್ , ಬಾಯಿ ಮತ್ತು ಗಂಟಲು, ಶ್ವಾಸಕೋಶ, ಮೃದು ಜೀವ ಕೋಶದ ಕ್ಯಾನ್ಸರ್ ಹಾಗೂ ಬ್ರೈನ್ ಟ್ಯೂಮರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಹಾಗೂ ಮಹಿಳೆಯರಲ್ಲಿಕಾಣಿಸಿಕೊಳ್ಳುವ ಗರ್ಭಕೋಶ ಕೊರಳಿನ ಕ್ಯಾನ್ಸರ್ , ಗರ್ಭಕೋಶ ಒಳಪದರು ಕ್ಯಾನ್ಸರ್ ರೋಗಿಗಳಿಗೆ ರೆಡಿಯೋ ಥೆರಪಿ ಚಿಕಿತ್ಸೆ ಪ್ರಮುಖವಾಗಿದೆ. ನೂತನ ಯಂತ್ರದಿಂದ ನಿತ್ಯ 20ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದ್ದು, ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ರೆಡಿಯೋ ಥೆರಪಿ ಚಿಕಿತ್ಸೆ ಸಹಕಾರಿಯಾಗಲಿದೆ.
* ಸ್ಥಗಿತಗೊಂಡಿದ್ದ ಚಿಕಿತ್ಸೆ : ಬಿಎಂಸಿಆರ್ ಸಿಯಲ್ಲಿನೂತನವಾಗಿ ಆರಂಭವಾದ ರೆಡಿಯೋ ಥೆರಪಿ ಚಿಕಿತ್ಸೆಯಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಅಲೆದಾಟ ತಪ್ಪಿದಂತಾಗಿದೆ. ಈ ಹಿಂದೆ ರೆಡಿಯೋ ಥೆರಪಿ ಚಿಕಿತ್ಸೆಗೆ ಇಲ್ಲಿನ ಬಿಎಂಸಿಆರ್ ಸಿಯಲ್ಲಿನಿತ್ಯ 30ರೋಗಿಗಳು ಒಳಗಾಗುತ್ತಿದ್ದರು. ಆದರೆ, ಕಳೆದ 15ತಿಂಗಳಿಂದ ರೆಡಿಯೋ ಥೆರಪಿ ಚಿಕಿತ್ಸೆ ಸಂಪೂರ್ಣ ಬಂದ್ ಆದ ಹಿನ್ನೆಲೆ ಕ್ಯಾನ್ಸರ್ ರೋಗಿಗಳು ದೂರದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿಯಂತಹ ನಗರಗಳಿಗೆ ತೆರಳುವಂತಹ ಅನಿವಾರ್ಯತೆ ಎದುರಾಗಿತ್ತು. ಅದಕ್ಕಾಗಿ, ಸಾವಿರಾರು ರೂಪಾಯಿ ವ್ಯಯಿಸುವಂತಾಗಿತ್ತು. ಈಗ ಬಿಎಂಸಿಆರ್ ಸಿಯಲ್ಲಿನೂತನವಾಗಿ ಅಳವಡಿಸಿದ ರೆಡಿಯೋ ಥೆರಪಿ ಯಂತ್ರದಿಂದಾಗಿ ಈಗ ಸ್ಥಳೀಯವಾಗಿಯೇ ಚಿಕಿತ್ಸೆ ದೊರಕಲು ಅವಕಾಶ ದೊರೆತಿದ್ದು, ಅದರಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ, ನೆರೆಯ ಆಂಧ್ರ, ತೆಲಂಗಾಣ ಗಡಿಭಾಗದ ಜಿಲ್ಲೆಗಳ ರೋಗಿಗಳಿಗೆ ರೆಡಿಯೋ ಥೆರಪಿ ಚಿಕಿತ್ಸೆ ಸಂಜೀವಿನಿಯಂತಾಗಿದೆ.
.......
ಕೋಟ್
ಬಿಎಂಸಿಆರ್ ಸಿಯಲ್ಲಿರೆಡಿಯೋ ಥೆರಪಿ ಚಿಕಿತ್ಸೆಗೆ ಸಂಬಂಧಿಸಿದಂತೆ ಈಗಾಗಲೇ ಖರೀದಿಸಿದ್ದ ಹೊಸ ಯಂತ್ರ ಅಳವಡಿಕೆ ಬಳಿಕ ಪ್ರಾಯೋಗಿಕ ಪರೀಕ್ಷೆ ಪ್ರಕ್ರಿಯೆ ಯಶಸ್ವಿಯಾಗಿದೆ. ಈ ಹಿನ್ನೆಲೆ ರೋಗಿಗಳಿಗೆ ಹೊಸ ಯಂತ್ರದ ಮೂಲಕ ಚಿಕಿತ್ಸೆ ಆರಂಭ ಮಾಡಲಾಗಿದ್ದು, ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಪರದಾಡದೆ ಬಿಎಂಸಿಆರ್ ಸಿಯಲ್ಲಿದೊರಕುವ ಸೌಲಭ್ಯವನ್ನು ಪಡೆದುಕೊಳ್ಳಬೇಕು.
- ಡಾ.ಮರಿರಾಜ್ , ಪ್ರಭಾರ ನಿರ್ದೇಶಕ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಬಳ್ಳಾರಿ.
12 ಮಾರುತಿ 03
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿರುವ ಕ್ಯಾನ್ಸರ್ ಚಿಕಿತ್ಸೆಗೆ ನೂತನವಾಗಿ ಅಳವಡಿಸಿದ ರೆಡಿಯೋ ಥೆರಪಿ ಯಂತ್ರದ ಮೂಲಕ ಚಿಕಿತ್ಸೆ ಆರಂಭಿಸಿರುವುದು.