ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ(ಇಂದು)

Contributed by: huchappabhovi@gmail.com|Vijaya Karnataka•
party workers must work together diligently for the congress candidates victory
ಚುನಾವಣೆ ಪೂರ್ವಭಾವಿ ಸಭೆ

ವಿಕ ಸುದ್ದಿಲೋಕ ನವಲಗುಂದ
ಪಶ್ಚಿಮ ಪಧವಿಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ನಿಟ್ಟಿನಲ್ಲಿಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಶಾಸಕ ಎನ್ . ಎಚ್ . ಕೋನರಡ್ಡಿ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿಜರುಗಿದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವರ್ಧಮಾನ ಹಿರೇಗೌಡ್ರ, ಶಿವಾನಂದ ಭೂಮಣ್ಣವರ, ಮಲಪ್ರಭಾ ಕುಡಿಯುವ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ, ಎಮ್ ಎಸ್ ರೋಣದ, ಎ. ಡಿ. ಕುಲಕರ್ಣಿ, ಆರ್ ಹೆಚ್ ಕೋನರಡ್ಡಿ, ಉಸ್ಮಾನ್ ಬಬರ್ಚಿ ಚುನಾವಣೆ ಕುರಿತು ಮಾತನಾಡಿದರು

ಇದಕ್ಕೂ ಮೊದಲು ಶಾಸಕ ಎನ್ ಎಚ್ ಕೋನರಡ್ಡಿಯವರು ಚುನಾವಣೆಯ ಸಿದ್ಧತೆ ಹಾಗೂ ಪಕ್ಷದ ಸಂಘಟನಾತ್ಮಕ ಕಾರ್ಯತಂತ್ರಗಳ ಕುರಿತು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದರು

ಹುಸೇನಬಿ ಧಾರವಾಡ, ಶಿವಣ್ಣ ಹುಬ್ಬಳ್ಳಿ, ಡಿ ಕೆ ಹಳ್ಳದ, ಮಹಾಂತೇಶ ಹಂಚಿನಾಳ, ಜೀವನ ಪವಾರ, ಮೋದಿನ ಶಿರೂರ, ರವಿ ಬೆಂಡಿಗೇರಿ, ಅಪ್ಪಣ್ಣ ಹಳ್ಳದ, ಎಮ್ ಎಮ್ ಮುಲ್ಲಾ, ಸಿರಾಜುದ್ದೀನ ಧಾರವಾಡ, ಸುರೇಶ ಮೇಟಿ, ಶಿವಾನಂದ ತಡಸಿ, ದಾವಲಸಾಬ ಖುದ್ದಣ್ಣವರ, ಕಿರಣ ಉಳ್ಳಿಗೇರಿ, ಶಿವಾನಂದ ಚಿಕ್ಕನರಗುಂದ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೋ : 1-ಎನ್ ವಿಎಲ್ -1

ನವಲಗುಂದ ಕಾಂಗ್ರೆಸ್ ಭವನದಲ್ಲಿಜರುಗಿದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿಶಾಸಕ ಎನ್ .ಎಚ್ .ಕೋನರೆಡ್ಡಿ ಮಾತನಾಡಿದರು.