*** ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ, ಎಂಎಲ್ಸಿ ರಘು ಕೌಟಿಲ್ಯ ಆಕ್ರೋಶ | ರಾಜ್ಯಾದ್ಯಂತ ಹಿಂದುಳಿದವರ ಜಾಗೃತಿ ಸಭೆ
ನಿಗಮಗಳಿಗೆ ಅನುದಾನ ನೀಡದೆ ಕಡೆಗಣಿಸಿದ ಸರಕಾರ
ವಿಕ ಸುದ್ದಿಲೋಕ ಕಲಬುರಗಿ
‘ಅಹಿಂದ’ ಹೆಸರಿನಲ್ಲಿಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಿಂದುಳಿದವರಿಗೆ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿಲ್ಲ. ಇದೀಗ ಡಿಕೆ ಶಿವಕುಮಾರ ನೇತೃತ್ವದ ಸರಕಾರ ಕೂಡ ಹಿಂದುಳಿದ ಸಮುದಾಯಗಳ ನಾನಾ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡದೆ ಸಂಪೂರ್ಣ ಕಡೆಗಣಿಸಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ, ಎಂಎಲ್ಸಿ ರಘು ಕೌಟಿಲ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಕೆಸಿಸಿ ಸಭಾಂಗಣದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಬಿಜೆಪಿ ಸರಕಾರದ ಅವಧಿಯಲ್ಲಿಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿಗಮಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿತ್ತು. 150 ಜಾತಿಗಳನ್ನು ಒಳಗೊಂಡ ಡಿ.ದೇವರಾಜ ಅರಸು ನಿಗಮಕ್ಕೆ ನೀಡಿದ್ದು 129.5 ಕೋಟಿ, ಅಲೆಮಾರಿ, ಅಲೆ ಮಾರಿ ಸಮುದಾಯಕ್ಕೆ ನೀಡಿದ್ದು 16.5 ಕೋಟಿ ರೂ. ಅಂಬಿಗರ ಚೌಡಯ್ಯ ನಿಗಮಕ್ಕೆ ನೀಡಿದ್ದು ಕೇವಲ 6.88 ಕೋಟಿ ರೂ. ಮಾತ್ರ. ಇದರಂತೆ ಹಲವು ನಿಗಮಕ್ಕೆ ಒಂದೆರಡು ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಇದರಿಂದ ತಾಲೂಕಿಗೆ ಇಬ್ಬರು ಮೂವರಿಗೂ ಗಂಗಾ ಕಲ್ಯಾಣ, ಅರಿಸು ಸೇರಿ ಯಾವ ಯೋಜನೆಗಳು ನೀಡಲು ಸಾಧ್ಯವಾಗುತ್ತಿಲ್ಲಎಂದು ಹರಿಹಾಯ್ದರು.
ತಳವಾರ ಎಸ್ ಸಿ ಮೀಸಲಾತಿ ಬಗ್ಗೆ ಸಮಸ್ಯೆಯಾಗಲು ಬೊಮ್ಮಾಯಿ ಸರಕಾರದ ನಿರ್ಧಾರ ಕಾರಣ ಎಂಬ ಪ್ರಿಯಾಂಕ್ ಖರ್ಗೆ ಮಾತಿಗೆ ಉತ್ತರಿಸಿದ ಅವರು, ಬೊಮ್ಮಾಯಿ ಸರಕಾರದ ಅವಧಿಯಲ್ಲಿಜನಸಂಖ್ಯೆಗೆ ಅನುಗುಣವಾಗಿ ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರಕಾರಕ್ಕೆ ಆ ಮೀಸಲಾತಿಯನ್ನು ಉಳಿಸಿಕೊಳ್ಳಲು ಹಾಗೂ ಅದರ ಪರವಾಗಿ ನ್ಯಾಯಾಲಯದಲ್ಲಿಸರಿಯಾಗಿ ಹೋರಾಟ ಮಾಡಲು ಸಾಧ್ಯವಾಗಿಲ್ಲಎಂದು ರಘು ಕೌಟಿಲ್ಯ ಹೇಳಿದರು. ಪ್ರಿಯಾಂಕ್ ಖರ್ಗೆ ಅವರು ಸಾಧ್ಯವಿದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಕೋಟ್ ..
ಚುನಾವಣಾ ಆಯೋಗದ ವಿರುದ್ಧ ಅಥವಾ ಯಾವುದೇ ಲೋಪಗಳಿದ್ದರೆ ಆಕ್ಷೇಪಣೆ ಸಲ್ಲಿಸಲು ಮತ್ತು ನ್ಯಾಯಾಲಯದ ಮೊರೆ ಹೋಗಲು ಕಾನೂನಿನಲ್ಲಿಅವಕಾಶವಿದೆ ಮುಖ್ಯಮಂತ್ರಿಗಳೇ ಸಾಂವಿಧಾನಿಕ ಕಚೇರಿಗಳು ಹಾಗೂ ನ್ಯಾಯಾಲಯಗಳ ಎದುರು ಪ್ರತಿಭಟನೆಗೆ ಮುಂದಾಗುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ.
- ರಘು ಕೌಟಿಲ್ಯ, ಎಂಎಲ್ಸಿ
ಬಾಕ್ಸ್ ...
ಸಂಸದರ ವೈಫಲ್ಯಕ್ಕೆ ಕಿಡಿ
ಕೇಂದ್ರ ಸರಕಾರದ ಮುದ್ರಾ, ವಿಶ್ವಕರ್ಮ ಮುಂತಾದ ಜನಕಲ್ಯಾಣ ಯೋಜನೆಗಳು ಕಲಬುರಗಿ ಜಿಲ್ಲೆಯಲ್ಲಿಜನರಿಗೆ ತಲುಪುತ್ತಿಲ್ಲಎಂಬ ಪ್ರಶ್ನೆಗೆ ಮಾಜಿ ಸಂಸದ ಉಮೇಶ್ ಜಾಧವ್ ಉತ್ತರಿಸಿ, ಸ್ಥಳೀಯ ಸಂಸದರು ಅದರ ಮೇಲುಸ್ತುವಾರಿ ವಹಿಸಬೇಕು. ಸ್ಥಳೀಯ ಸಂಸದರು ಬ್ಯಾಂಕರ್ಸ್ ಸಭೆ ಹಾಗೂ ದಿಶಾ ಸಭೆಗಳನ್ನು ಸರಿಯಾಗಿ ನಡೆಸುತ್ತಿಲ್ಲ. ಈ ಹಿಂದೆ ನಾವು ನಿಯಮಿತವಾಗಿ ಬ್ಯಾಂಕರ್ಸ್ ಸಭೆ ಕರೆದು ಯೋಜನೆಗಳ ಪ್ರಗತಿ ಪರಿಶೀಲಿಸುತ್ತಿದ್ದೆವು. ಆದರೆ, ಈಗಿನ ಸಂಸದರ ನಿರ್ಲಕ್ಷ್ಯದಿಂದ ದಿಶಾ ಸಭೆ ನಡೆಯುತ್ತಿಲ್ಲ. ಇನ್ನು ಕೆಡಿಪಿ ಸಭೆ ನಡೆಸಿ ವರ್ಷಗಳು ಉರುಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.