ಸುಳ್ಯದಲ್ಲಿಬಿಎಸ್ಸೆನ್ನೆಲ್ ಪಿಂಚಣಿದಾರರ ಪ್ರತಿಭಟನೆ

Contributed by: mpadmanabha51@gmail.com|Vijaya Karnataka•
intense protest by bsnl pensioners in sullia
ವಿಕ ಸುದ್ದಿಲೋಕ ಸುಳ್ಯ

ಬಿಎಸ್ ಎನ್ ಎಲ್ ಆಡಳಿತವು ಪಿಂಚಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಹೊರಡಿಸಿದ್ದ ಆದೇಶವನ್ನು ವಿರೋಧಿಸಿ ಸುಳ್ಯ ತಾಲೂಕು ಬಿಎಸ್ ಎನ್ ಎಲ್ ಮತ್ತು ದೂರಸಂಪರ್ಕ ಪಿಂಚಣಿದಾರರು ಸುಳ್ಯದ ಬಿಎಸ್ ಎನ್ ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸುಳ್ಯ ಶಾಖೆಯ ಅಧ್ಯಕ್ಷ ಗೋಪಾಲ ನಾಯ್ ್ಕ ದೊಡ್ಡೇರಿ ಮಾತನಾಡಿ, 2008ರಲ್ಲಿಸುಮಾರು 12 ಸಾವಿರ ಕೋಟಿ ರೂ. ಲಾಭದಲ್ಲಿದ್ದ ಕೇಂದ್ರ ಸರಕಾರದ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆ ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ಪೂರಕವಾಗಿ ತನ್ನ ನೀತಿಗಳನ್ನು ಬದಲಾಯಿಸಿದ ಕಾರಣದಿಂದಾಗಿ ಬಿಎಸ್ ಎನ್ ಎಲ್ ಸಂಸ್ಥೆ ನಷ್ಟದತ್ತ ಸಾಗಿತ್ತು. 2017ರಿಂದ ಜಾರಿಗೊಳಿಸಬೇಕಾಗಿದ್ದ ಪಿಂಚಣಿ ಪರಿಷ್ಕರಣೆಯನ್ನು ಶೀಘ್ರದಲ್ಲೇ ಜಾರಿಗೊಳಿಸಬೇಕು. ಪಿಂಚಣಿದಾರರ ಪಿಂಚಣಿ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಪ್ರಕ್ರಿಯೆಯಲ್ಲಿಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿನಿವೃತ್ತಿ ಹೊಂದಿದ ಬಿಎಸ್ ಎನ್ ಎಲ್ ಮತ್ತು ದೂರಸಂಪರ್ಕ ಪಿಂಚಣಿದಾರರು ಭಾಗವಹಿಸಿದ್ದರು.

ಫೋಟೋ...

3ಎಸ್ ಯುಎಲ್ -ಸುಳ್ಯದಲ್ಲಿಬಿಎಸ್ ಎನ್ ಎಲ್ ಮತ್ತು ದೂರಸಂಪರ್ಕ ಪಿಂಚಣಿದಾರರಿಂದ ಪ್ರತಿಭಟನೆ ನಡೆಯಿತು.