ವಿಕ ಸುದ್ದಿಲೋಕ ಹರಪನಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಎಸ್ .ರಾಮಪ್ಪ ಆಯ್ಕೆಯಾಗಿದ್ದಾರೆ.
ತಾಲೂಕು ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ವೈಯಕ್ತಿಕ ಕಾರಣದಿಂದ ಎಂ.ಪ್ರಭು ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎಸ್ .ರಾಮಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಿಕ್ಷಕರ ಪತ್ತಿನ ಬ್ಯಾಂಕಿನ ಅಧ್ಯಕ್ಷ ಕೆ.ಜಿ.ಶಿವಕುಮಾರ್ , ಉಪಾಧ್ಯಕ್ಷ ವೃಷಭೇಂದ್ರಪ್ಪ, ಸದಸ್ಯರಾದ ಬಿ.ಮಂಜುನಾಥ , ಚಂದ್ರಮೌಳಿ, ಕೃಷ್ಣ ನಾಯಕ್ , ಬಂದೋಳ ಸಿದ್ದೇಶ, ಶಿವಮೂರ್ತಿ, ಮಹಾದೇವಪ್ಪ, ರೇವಣಸಿದ್ದಪ್ಪ, ರಾಜಶೇಖರ, ಸುಲೇಮಾನ್ ದೊಡ್ಮನಿ, ಕೊಟ್ರೇಶಪ್ಪ, ಹೇಮಲತಾ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ. ರಮೇಶ, ಶಿಕ್ಷಕರ ಸಂಘದ ಉಪಾಧ್ಯಕ್ಷೆ ಬಿ.ಎಚ್ .ಎಂ.ಕೊಟ್ರಮ್ಮ, ಸಂಘದ ಪದಾಧಿಕಾರಿಗಳಾದ ಬಂಡಿ ಬಸವರಾಜ, ಮುನ್ಸೂರ್ ಅಹಮದ್ , ಕೆ.ಹರೀಶ , ಸೊಪ್ಪಿನ ಹನುಮಂತಪ್ಪ, ಸಾರಥಿ ಹನುಮಂತಪ್ಪ, ರಾಘವೇಂದ್ರ ಎಂ.ಎಚ್ ., ಎಚ್ .ವಿಜಯಲಕ್ಷ್ಮಿ, ಶಾಂತಮ್ಮ, ಗಿರಿಜಾ ಎಂ., ಹೇಮಾವತಿ, ಮುಖ್ಯಗುರುಗಳ ಸಂಘದ ಅಧ್ಯಕ್ಷ ಅರ್ಜುನ್ ಪರಸಪ್ಪ , ಕಾರ್ಯದರ್ಶಿ ಹಾಲೇಶ್ ನಾಯಕ್ , ಅಧ್ಯಕ್ಷ ಪಿ. ಅಂಜಿನಪ್ಪ, ಜಿಪಿಟಿ ಸಂಘದ ನೂತನ ಅಧ್ಯಕ್ಷ ಕೆ ಹನುಮಂತಪ್ಪ, ಕಾರ್ಯದರ್ಶಿ ಶಿವರಾಜ್ , ಸದಸ್ಯರಾದ ರಾಜ ನಾಯಕ್ , ಹನುಮಂತಪ್ಪ ಜಿ., ವೀರಯ್ಯ, ರಶ್ಮಿ ಬಿ.ಕೆ., ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯಣ್ಣ ಪೂಜಾರ್ , ನಟರಾಜ್ , ವಿಕಲಚೇತನ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.
ಚಿತ್ರ
ಹರಪನಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಎಸ್ .ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.