ನಾದಾನುಸಂಧಾನ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿನಗರದ ಟಿಆರ್ ಸಿ ಹಾಲ್ ನಲ್ಲಿಅ.9ರ ಸಂಜೆ 5ಕ್ಕೆ ನಾದೋಪಾಸನಂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗೀತ ಕ್ಷೇತ್ರದ ದಿಗ್ಗಜ ಪದ್ಮಶ್ರೀ ಪಂಡಿತ್ ವೆಂಕಟೇಶಕುಮಾರ್ ಅವರು ಹಿಂದುಸ್ತಾನಿ ಶಾಸ್ತಿ್ರೕಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿಭೀಮಾಶಂಕರ್ ಬಿದನೂರು, ಹಾರ್ಮೋನಿಯಂನಲ್ಲಿಅಜಯ್ ಹೆಗಡೆ ವರ್ಗಾಸರ, ಮಂಜೀರಾದಲ್ಲಿಅನಂತಮೂರ್ತಿ ಮುತ್ತಿಘಟ್ಟ ಸಾಥ್ ನೀಡಲಿದ್ದಾರೆ. ನಂತರ ಭಾರ್ಗವ ರಾವ್ ಬೆಂಗಳೂರು ಇವರಿಂದ ಬಾನ್ಸುರಿ ವಾದನ ಹಾಗೂ ಡಾ. ಶ್ರೀಹರಿ ದಿಗ್ಗಾವಿ ಧಾರವಾಡ ಇವರಿಂದ ತಬಲಾ ವಾದನ ಜರುಗಲಿದೆ. ಇದೇ ವೇಳೆ ಸಂಗೀತ ಹಾಗೂ ಯೋಗ ಕ್ಷೇತ್ರದಲ್ಲಿಗಣನೀಯ ಸೇವೆ ಸಲ್ಲಿಸಿರುವ ವಿದ್ವಾನ್ ಮೋಹನ ಹೆಗಡೆ, ಹುಣಸೆಕೊಪ್ಪ (ಸಂಗೀತ ಕ್ಷೇತ್ರ) ಹಾಗೂ ವಿದ್ವಾನ್ ಸುಧೀರ್ ಎಚ್ .ಎಂ., ಶೃಂಗೇರಿ (ಯೋಗ ಕ್ಷೇತ್ರ) ಅವರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ಧಾರೆ.