ವಿಕ ಸುದ್ದಿಲೋಕ ಧಾರವಾಡಧಾರವಾಡ ಅಂಚೆ ವಿಭಾಗದ ವಿಭಾಗೀಯ ಮಟ್ಟದ ಅಕ್ಟೋಬರ್ -2026 ತಿಂಗಳಿನ ಡಾಕ್ ಅದಾಲತ್ ನ್ನು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಅಧ್ಯಕತೆಯಲ್ಲಿಅ. 8ರಂದು ಬೆಳಿಗ್ಗೆ 11ಕ್ಕೆ ನಗರದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿಆಯೋಜಿಸಲಾಗಿದೆ.
ಅಂಚೆ ಸೇವೆಗಳಿಗೆ ಸಂಬಂಧಿಸಿದ ಎಲ್ಲಾರೀತಿಯ ದೂರುಗಳು ವಿಶೇಷವಾಗಿ ಅಂಚೆ, ಸ್ಪೀಡ್ ಪೋಸ್ಟ್ ಪಾರ್ಸೆಲ್ , ಕೌಂಟರ್ ಸೇವೆ, ಉಳಿತಾಯ ಬ್ಯಾಂಕ್ , ಮನಿ ಆರ್ಡರ್ ಹಾಗೂ ದುರುಪಯೋಗ ಅಥವಾ ದುರ್ಬಳಕೆಗೆ ಸಂಬಂಧಿಸಿದ ದೂರುಗಳನ್ನು ಡಾಕ್ ಅದಾಲತ್ ನಲ್ಲಿಪರಿಗಣಿಸಲಾಗುವುದು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ, ಖುದ್ದಾಗಿ ಅಥವಾ ಇ-ಮೇಲ್ ಮೂಲಕ ಡಾಕ್ ಅದಾಲತ್ , ಹಿರಿಯ ಅಂಚೆ ಅಧೀಕ್ಷಕರ ಕಚೇರಿ,ಅಂಚೆ ವಿಭಾಗ, ಧಾರವಾಡ - 580008 ಇವರಿಗೆ ಅ.6ರೊಳಗಾಗಿ ಸಲ್ಲಿಸಬಹುದು.
ಸಾರ್ವಜನಿಕರ ಅನುಕೂಲಕ್ಕಾಗಿ ಡಾಕ್ ಅದಾಲತ್ ನಲ್ಲಿವಿಡಿಯೋ ಕಾನ್ಘರನ್ಸ್ ಮೂಲಕ ಭಾಗವಹಿಸುವ ಸೌಲಭ್ಯವೂ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಸಮೀಪದ ಪ್ರಧಾನ ಅಂಚೆ ಕಚೇರಿಯಿಂದ ಭಾಗವಹಿಸಬಹುದಾಗಿದೆ ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.