ಶರನ್ನವರಾತ್ರಿ ಮಹೋತ್ಸವ

Contributed by: mambadynews@gmail.com|Vijaya Karnataka•
sharad navaratri celebration 2023 special pujas at bc road temple
ಬಿ.ಸಿ.ರೋಡ್ ಶ್ರೀಅನ್ನಪೂರ್ಣೇಶ್ವರಿ ಸನ್ನಿಧಿ

ಬಂಟ್ವಾಳ: ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿಅ.11ರಿಂದ ಅ.21ರವರೆಗೆ ಶರನ್ನವರಾತ್ರಿ ಪ್ರಯುಕ್ತ ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿನವರಾತ್ರಿ ಮಹೋತ್ಸವ, ಚಂಡಿಕಾಹೋಮ ಮತ್ತಿತರ ಸೇವೆಗಳು ನಡೆಯಲಿವೆ.
ಅ.21ರಂದು ರಾತ್ರಿ 7.30ರಿಂದ ರಂಗಪೂಜೆ, ಮಹಾಪೂಜೆಯೊಂದಿಗೆ ದೇವಿಗೆ ವಿಶೇಷ ಅಷ್ಟಾವಧಾನ ಸೇವೆ ನಡೆಯಲಿದೆ. ಅ.14ರಂದು ಕುಮಾರಿ ದುರ್ಗಾಪೂಜೆ , ಚೌತಿ ಹೊಸ ಅಕ್ಕಿ ನೈವೇದ್ಯ, ತೆನೆಕೊಡುವ ದಿನವಾಗಿದೆ. 15ರಂದು ಲಲಿತಾ ಪಂಚಮಿ, ಅ.16ರಂದು ಮಹಿಷಮರ್ದಿನಿ ದುರ್ಗಾಪೂಜೆ, ವಿಶೇಷ ನಾಗಾರಾಧನೆ ಇರಲಿದೆ. 17ರಂದು ಚಂಡಿಕಾ ದುರ್ಗಾಪೂಜೆ, 18ರಂದು ಚಂಡಿಕಾ ದುರ್ಗಾಪೂಜೆ ಕುಂಕುಮ ಅಲಂಕಾರ ಸಹಿತ ನಡೆಯಲಿದೆ. 20ರಂದು ವಾಗೇಶ್ವರಿ ದುರ್ಗಾಪೂಜೆ, ಆಯುಧ ಪೂಜೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದ್ದಾರೆ.

ಚಿತ್ರ: 2ಬಿಎಚ್ ಅನ್ನಪೂರ್ಣೇಶ್ವರಿ