ಪೈಪ್ ಲೈನ್ ತೆರವಿಗೆ ಆಗ್ರಹ

Contributed by: vinu1273@gmail.com|Vijaya Karnataka•
youth demand for pipeline removal in kushalanagara
ಪೈಪ್ ಲೈನ್ ತೆರವಿಗೆ ಆಗ್ರಹ

ವಿಕಸುದ್ದಿಲೋಕ ಕುಶಾಲನಗರ
ಅಮೃತ-2 ಕುಡಿಯುವ ನೀರು ಯೋಜನೆಯಡಿ ಕೂಡಿಗೆಯ ಹಳೆ ಸೇತುವೆ ಮೂಲಕ ಕುಶಾಲನಗರಕ್ಕೆ ಹಾದು ಹೋಗಿರುವ ಪೈಪ್ ಲೈನ್ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಾರಂಗಿ ನದಿ ಸೇತುವೆಯಲ್ಲಿವಾಹನ ದಟ್ಟಣೆ ಹಿನ್ನೆಲೆ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತಿರುಗಾಟಕ್ಕೆ ಹಳೆಯ ಸೇತುವೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಪೈಪ್ ಲೈನ್ ಅನ್ನು ಸೇತುವೆ ಮಧ್ಯ ಭಾಗದಲ್ಲಿಅವೈಜ್ಞಾನಿಕವಾಗಿ ಅಳವಡಿಕೆ ಮಾಡಿರುವ ಕಾರಣ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಟಿ.ಪಿ.ಹಮೀದ್ , ಎಸ್ . ಆರ್ .ಅರುಣ್ ರಾವ್ , ಬಾಲಕೃಷ್ಣ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

03 ಕೆಯುಎಸ್ 01 ಚಿತ್ರದಲ್ಲಿಕೂಡಿಗೆ ಹಳೆ ಸೇತುವೆ ಮೇಲೆ ಅಳವಡಿಸಿರುವ ಪೈಪ್ ಲೈನ್ ತೆರವಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.