ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾಯೋಜನಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಹೇಳಿಕೆ
ವಿಕ ಸುದ್ದಿಲೋಕ ವಿರಾಜಪೇಟೆಮದ್ಯಪಾನದಿಂದ ನೊಂದ ಕುಟುಂಬವನ್ನು ರಕ್ಷಿಸುವ ಜತೆಗೆ ಕುಡಿತದ ಚಟದಿಂದ ಬಳಲುತ್ತಿರುವ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಮದ್ಯವರ್ಜನ ಶಿಬಿರಗಳ ಅಭಿಯಾನ ಮಾಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾಯೋಜನಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಹೇಳಿದರು.
ವಿರಾಜಪೇಟೆ ತಾಲೂಕಿನ ರಾಮನಗರ ಹೆಗ್ಗಳದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಮ್ಮುಖದಲ್ಲಿನಡೆದ 2131ನೇ ಬೃಹತ್ ಮದ್ಯವರ್ಜನ ಶಿಬಿರದಲ್ಲಿಮಾತನಾಡಿದರು.
‘‘ಸಮಾಜದಲ್ಲಿಮದ್ಯಪಾನದಿಂದಾಗಿ ಹೆಣ್ಣುಮಕ್ಕಳು ಮತ್ತು ತಾಯಂದಿರು ಅನುಭವಿಸುತ್ತಿರುವ ನರಕಯಾತನೆ ಹಾಗೂ ಕಣ್ಣೀರನ್ನು ತಪ್ಪಿಸಲು ಈ ಮದ್ಯವರ್ಜನ ಶಿಬಿರಗಳ ಮಹಾ ಅಭಿಯಾನ ನಡೆಸಲಾಗುತ್ತಿದೆ. ಕುಡಿತದ ಬಲೆಯಿಂದ ಹೊರಬರಲು ಬಯಸುವವರಿಗೆ ಇಲ್ಲಿಸಂಪೂರ್ಣ ವೈಜ್ಞಾನಿಕ ಆಪ್ತಸಮಾಲೋಚನೆ ಹಾಗೂ ಪುನರ್ಜನ್ಮ ನೀಡುವ ವಾತಾವರಣ ಕಲ್ಪಿಸಲಾಗುತ್ತದೆ. ನಮ್ಮ ಹೆಣ್ಣುಮಕ್ಕಳು ನರಕದ ಕೂಪದಿಂದ ಹೊರಬಂದು ಸಂಸಾರದಲ್ಲಿನವಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಮೂಲ ಆಶಯದೊಂದಿಗೆ ಈ ಶಿಬಿರಗಳನ್ನು ನಡೆಸಲಾಗುತ್ತಿದೆ,’’ಎಂದು ತಿಳಿಸಿದರು.
ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ,‘‘ಮದ್ಯಪಾನವೆಂಬುದು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಂಪೂರ್ಣವಾಗಿ ಹಾನಿ ಮಾಡುವ ವಿಷಕಾರಿಯಾಗಿದೆ. ಕುಡಿತದಿಂದಾಗಿ ಯಕೃತ್ತು (ಲಿವರ್ ), ಮೆದುಳು ಹಾಗೂ ಹೃದಯದಂತಹ ಪ್ರಮುಖ ಅಂಗಗಳು ಹಾಳಾಗಿ ವ್ಯಕ್ತಿಯು ಅಕಾಲಿಕ ಮರಣಕ್ಕೆ ಶರಣಾಗಬೇಕಾಗುತ್ತದೆ. ಕೇವಲ ವ್ಯಕ್ತಿಯ ಆರೋಗ್ಯವಷ್ಟೇ ಅಲ್ಲದೆ, ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಬೀದಿಪಾಲಾಗಲು ಮದ್ಯವೇ ಮೂಲ ಕಾರಣವಾಗಿದೆ,’’ ಎಂದು ತಿಳಿಸಿದರು.
‘‘ಆರೋಗ್ಯಯುತ ಮತ್ತು ನೆಮ್ಮದಿಯ ಬದುಕನ್ನು ನಡೆಸಲು ಪ್ರತಿಯೊಬ್ಬರೂ ವ್ಯಸನ ತ್ಯಾಗ ಮಾಡುವುದು ಅತಿಮುಖ್ಯ,’’ ಎಂದು ಹೇಳಿದರು.
ಗೋಣಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಕುಲ್ಲಚಂಡ ಎಸ್ . ಪ್ರಮೋದ್ ಗಣಪತಿ ಮಾತನಾಡಿ, ‘‘ಕುಡಿತದ ಚಟಕ್ಕೆ ಬಲಿಯಾದವರು ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಮಾತ್ರ ಆ ಕೂಪದಿಂದ ಹೊರಬರಲು ಸಾಧ್ಯವಿದೆ,’’ಎಂದು ಸಲಹೆ ನೀಡಿದರು.
ಬೇಟೋಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಮಂಜುಳಾ ಮಾತನಾಡಿ,‘‘ಮನೆಯ ಯಜಮಾನ ಅಥವಾ ಪ್ರಮುಖರು ಮದ್ಯಕ್ಕೆ ದಾಸರಾದರೆ ಆ ಇಡೀ ಕುಟುಂಬ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಪೂರ್ಣವಾಗಿ ಕುಸಿದುಹೋಗುತ್ತದೆ. ಗ್ರಾಮದ ಮತ್ತು ಕುಟುಂಬದ ಸರ್ವತೋಮುಖ ಪ್ರಗತಿಗೆ ಪ್ರತಿಯೊಬ್ಬರೂ ವ್ಯಸನ ಮುಕ್ತರಾಗುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ,’’ಎಂದು ಅವರು ತಿಳಿಸಿದರು.
ಜಿಲ್ಲಾಜನಜಾಗೃತಿ ವೇದಿಕೆ ಕೊಡಗು ಜಿಲ್ಲೆಯ ಸದಸ್ಯರಾದ ಕೋಳೇರ ದಯಾ ಚಂಗಪ್ಪ, ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ, ಕೊಡಗು ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ , 2131ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವಿ. ಜೇಮ್ಸ್ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾಅಧ್ಯಕ್ಷ ಎ.ಟಿ.ರಂಗಸ್ವಾಮಿ,ವಿ.ಎಂ. ಸುಬ್ರಮಣಿ ಹಾಗೂ ಮುಕ್ಕಾಟಿರ ಜಾನಕಿ ಕಾವೇರಪ್ಪ ಮಾತನಾಡಿದರು.
ವೇದಿಕೆಯಲ್ಲಿಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಪಿ. ಸಂತೋಷ್ , ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಲಕ್ಷ್ಮಿ ಶಶಿಕಾಂತ್ , ಉಪಾಧ್ಯಕ್ಷರಾದ ಬಿ.ಎಂ.ಗಣೇಶ್ , ರೇಖಾ ಗಣೇಶ್ , ಮಾಜಿ ಸದಸ್ಯ ಸುಧೀಶ್ , ಸುಮನ ಪ್ರವೀಣ್ ಮತ್ತಿತರರು ಹಾಜರಿದ್ದರು.
ಪೊಟೊ:ಎಂಡಿಕೆ01ವಿಪಿಟಿ04ಎ: ವಿರಾಜಪೇಟೆ ತಾಲೂಕಿನ ರಾಮನಗರ ಹೆಗ್ಗಳದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿನಡೆದ ಮದ್ಯವರ್ಜನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.