ನಿಪ್ಪಾಣಿ: ತಾಲೂಕಿನ ಕೊಗನೊಳ್ಳಿ ಗ್ರಾಮದ ಬಳಿ ಶನಿವಾರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿರುವ ಸ್ಥಳೀಯ ಪೊಲೀಸರು 10 ಸಾವಿರ ಮೌಲ್ಯದ 218 ಗ್ರಾಂ ಗಾಂಜಾ, 500 ನಗದು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಕೊಗನೊಳ್ಳಿ ಗ್ರಾಮದ ಪ್ರತೀಕ ತಾನಾಜಿ ಶಿಂಧೆ (20) ಮತ್ತು ಕೊಲ್ಲಾಪುರ ಜಿಲ್ಲೆಯ ಕಾಗಲ್ ಪಟ್ಟಣದ ಸಾರ್ಥಕ ಧನಾಜಿ ಗಾಡೆಕರ (20) ಬಂಧಿತ ಆರೋಪಿಗಳು. ಈ ಕುರಿತು ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.4ಎನ್ ಪಿಎನ್ 1: ಪ್ರತೀಕ, ಸಾರ್ಥಕ