* ಕೇಂದ್ರ ಬರ ಅಧ್ಯಯನ ತಂಡ ಭೇಟಿ* ಅಳಲು ತೋಡಿಕೊಳ್ಳಲು ರೈತಾಪಿ ವರ್ಗ ಅಣಿ
* ಬರ ಪೀಡಿತ ತಾಲೂಕುಗಳಲ್ಲಿಬೆಳೆ ಹಾನಿ ಪರಿಶೀಲನೆ
ಶ್ರೀಕಾಂತ ಅಕ್ಕಿ ಕೊಪ್ಪಳ
ಜಿಲ್ಲಾದ್ಯಂತ ಬರ ತಾಂಡವವಾಡುತ್ತಿದ್ದು, ಅನ್ನದಾತರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆ. ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಲಿದೆ. ಹೀಗಾಗಿ ನೋವಿಗೆ ಸ್ಪಂದನೆ ಸಿಗಲಿದೆ ಎಂಬ ಭರವಸೆಯಲ್ಲಿರೈತರಿದ್ದಾರೆ.
ಬರ ಅಧ್ಯಯನ ತಂಡ ಸಮರ್ಪಕ ಪರಿಶೀಲಿಸಿ, ಹೆಚ್ಚಿನ ಬರ ಪರಿಹಾರ ಕೇಂದ್ರ ಸರಕಾರದಿಂದ ಸಿಗುವಂತೆ ಮಾಡಲಿ ಎಂಬುದು ರೈತರ ಒತ್ತಾಸೆಯಾಗಿದೆ.
ಗಂಗಾವತಿ, ಕಾರಟಗಿ ತಾಲೂಕು ಹಾಗೂ ಕೊಪ್ಪಳ ತಾಲೂಕಿನ ಹಿಟ್ನಾಳ್ ಹೋಬಳಿ ನೀರಾವರಿ ಪ್ರದೇಶವಿದ್ದರೂ ಉಳಿದಂತೆ ಕುಕನೂರು,
ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲೂಕುಗಳು ಖುಷ್ಕಿ ಜಮೀನು ಹೊಂದಿವೆ. ಆದರೆ, ಜಲಾನಯನ ಪ್ರದೇಶದಲ್ಲಿಮಳೆಯಾಗದ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಆವಕದಲ್ಲಿಕಡಿಮೆಯಾಗಿದ್ದು, ನೀರಾವರಿ ಪ್ರದೇಶದ ರೈತರ ಜತೆ ಒಣ ಬೇಸಾಯದ ಪ್ರದೇಶದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬರ ಪ್ರದೇಶ:
ಜಿಲ್ಲೆಯಲ್ಲಿ302664.63 ಹೆಕ್ಟೇರ್ ಪ್ರದೇಶದಲ್ಲಿಬೆಳೆ ಹಾನಿಯಾಗಿದೆ. ಸರಕಾರ ಗಂಗಾವತಿ, ಕನಕಗಿರಿ, ಕುಕನೂರು, ಕಾರಟಗಿ, ಕೊಪ್ಪಳ,
ಯಲಬುರ್ಗಾ, ಕುಷ್ಟಗಿ ತಾಲೂಕು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ, ರಾಜ್ಯ ಸರಕಾರದಿಂದ ರೈತರಿಗೆ ಬರ ಪರಿಹಾರ ವಿತರಿಸಿಲ್ಲ. ಪ್ರತಿ ರೈತನಿಗೆ 2500 ರೂ. ನೀಡುವ ವಾಗ್ದಾನ ಮಾಡಿದ್ದರೂ ಅನ್ನದಾತರ ಖಾತೆಗೆ ನಯಾಪೈಸೆ ಜಮೆಯಾಗಿಲ್ಲ.
ಬಾಕ್ಸ್ -
ಬೆಳೆ ಹಾನಿ ಮಾಹಿತಿ
ಜಿಲ್ಲೆಯ ಪೈಕಿ ಕೊಪ್ಪಳ ತಾಲೂಕಿನಲ್ಲಿ60329.41ಹೆಕ್ಟೇರ್ ನಲ್ಲಿ ಕೃಷಿ ಬೆಳೆ, 2692.78ಹೆಕ್ಟೇರ್ ನಲ್ಲಿತೋಟಗಾರಿಕೆ ಬೆಳೆ ಹಾಳಾಗಿದೆ. ಯಲಬುರ್ಗಾ ತಾಲೂಕಿನಲ್ಲಿ63002 ಹೆಕ್ಟೇರ್ ಕೃಷಿ-1576.67 ತೋಟಗಾರಿಕೆ ಬೆಳೆ, ಕುಕನೂರು ತಾಲೂಕಿನಲ್ಲಿ44320 ಹೆ.ಕೃಷಿ-465 ಹೆ.ತೋಟಗಾರಿಕೆ, ಗಂಗಾವತಿ ತಾಲೂಕಿನಲ್ಲಿ3549.59 ಹೆಕ್ಟೇರ್ ಪ್ರದೇಶದಲ್ಲಿಕೃಷಿ ಬೆಳೆ, ಕನಕಗಿರಿ ತಾಲೂಕಿನಲ್ಲಿ30784 ಹೆಕ್ಟೇರ್ ಕೃಷಿ ಬೆಳೆ, ಕುಷ್ಟಗಿ ತಾಲೂಕಿನಲ್ಲಿ89774.08 ಹೆಕ್ಟೇರ್ ಕೃಷಿ ಬೆಳೆಯ ಪ್ರದೇಶ ಸೇರಿ ಒಟ್ಟು 294364.18 ಕೃಷಿ ಬೆಳೆ, 8300.45 ಹೆಕ್ಟೇರ್ ಪ್ರದೇಶದಲ್ಲಿತೋಟಗಾರಿಕೆ ಬೆಳೆ ಹಾನಿಯಾಗಿದೆ. 2174.55 ಕೋಟಿ ರೂ.ಲೆಕ್ಕದಲ್ಲಿಬೆಳೆ ಹಾನಿಯಾಗಿರುವ ಕುರಿತು ಜಿಲ್ಲಾಡಳಿತ ಲೆಕ್ಕ ಹಾಕಿ, ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದೆ.
ಬಾಕ್ಸ್ -
ಇಂದು ಬರ ಪರಿಶೀಲನೆ
ಜಿಲ್ಲೆಯ ಕುಷ್ಟಗಿ ಭಾಗಕ್ಕೆ ಆ.5ರಂದು 12-30ಕ್ಕೆ ಪ್ರವೇಶಿಸುವ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಕುಕನೂರು, ಕನಕಗಿರಿ, ಗಂಗಾವತಿ ಭಾಗದಲ್ಲಿಬರ ಪರಿಶೀಲಿಸುವ ಸಾಧ್ಯತೆಯಿದೆ. ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರಾಗಿರುವ ಡಾ.ಮನ್ ಸಿಂಗ್ ಅವರ ನೇತೃತ್ವದ ತಂಡ ಬರ ಪರಿಸ್ಥಿತಿ ತಿಳಿಸಿ, ಬಳಿಕ ಬರ ಅಧ್ಯಯನ ತಂಡ ವಿಜಯನಗರ ಜಿಲ್ಲೆಗೆ ತೆರಳಲಿದೆ.
ಕೋಟ್ -
ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಆ.5ರಂದು ಆಗಮಿಸುತ್ತಿದೆ. ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವ ಕುರಿತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗುವುದು.