ಸುಖಮಯ ಜೀವನಕ್ಕೆ ಆರೋಗ್ಯವೇ ಪ್ರಥಮ

Contributed by: sathish.pundikai@gmail.com|Vijaya Karnataka•
health check up camp to ensure a happy life
ಕೈರಂಗಳ ಶಾರದೋತ್ಸವದ ರಜತ ಸಂಭ್ರಮ ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣೆ ಶಿಬಿರ

ವಿಕ ಸುದ್ದಿಲೋಕ ಕೊಣಾಜೆ
ಕೇವಲ ಪ್ರಾರ್ಥಿಸಿದರಷ್ಟೆ ನಾವು ಸುಖವಾಗಿರಲು ಸಾಧ್ಯವಿಲ್ಲ. ಬದುಕಿನಲ್ಲಿಸುಖವಾಗಿರಲು ಆರೋಗ್ಯವೇ ಪ್ರಥಮವಾಗಿದ್ದು ಆ ನಿಟ್ಟಿನಲ್ಲಿಆರೋಗ್ಯ ತಪಾಸಣೆ ಶಿಬಿರಗಳು ಬಹಳ ಪ್ರಾಮುಖ್ಯವಾಗಿವೆ ಎಂದು ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಹೇಳಿದರು.

ನರಿಂಗಾನ ಕೈರಂಗಳದ ಸಾರ್ವಜನಿಕ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿ ಹಾಗೂ ದೇರಳಕಟ್ಟೆ ಕೆ.ಎಸ್ .ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ಆಶ್ರಯದಲ್ಲಿ25ನೇ ವರ್ಷದ ಕೈರಂಗಳ ಸಾರ್ವಜನಿಕ ಶಾರದೋತ್ಸವದ ಪ್ರಯುಕ್ತ ಭಾನುವಾರ ದುಗ್ಗಜ್ಜರಕಟ್ಟೆ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಸಾರ್ವಜನಿಕ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೈರಂಗಳ ಸಾರ್ವಜನಿಕ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಹೊಸಮಾರು ಅಧ್ಯಕ್ಷತೆ ವಹಿಸಿದ್ದರು. ಕೈರಂಗಳ ವಿದ್ಯಾನಗರ ರಿಫಾಯಿ ಮಸೀದಿ ಅಧ್ಯಕ್ಷ ಹೈದರ್ ಕೈರಂಗಳ, ದೇರಳಕಟ್ಟೆ ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ಇ-ಟಿ ತಜ್ಞರಾದ ಡಾ.ಡಯಾನ ಉಪಸ್ಥಿತರಿದ್ದರು.

ಕೈರಂಗಳ ಸಾರ್ವಜನಿಕ ಶ್ರೀ ಶಾರದೋತ್ಸವ ನಾಡಹಬ್ಬ ಸಮಿತಿ ಅಧ್ಯಕ್ಷ ಅರವಿಂದ ಕೆ. ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಲೋಹಿತ್ ವಿ. ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಜಿ. ವಂದಿಸಿದರು.

ಫೋಟೋ 4ಉಳ್ಳಾಲ ಕೈರಂಗಳ