ಸುಳ್ಯದಲ್ಲಿರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ ಷಿಪ್ ಸುಳ್ಯ ಕಬಡ್ಡಿ ಉತ್ಸವಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು.ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಎರಡು ದಿನಗಳ ಕಾಲ ನಡೆಯುವ ಕಬಡ್ಡಿ ಉತ್ಸವವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉದ್ಘಾಟಿಸಿದರು.
ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ.ಉಜ್ವಲ್ ಯು.ಜೆ., ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಉಪಸ್ಥಿತರಿದ್ದರು. ಗುರುದತ್ ನಾಯಕ್ ಸ್ವಾಗತಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿಬಲಿಷ್ಠ ಬಿಪಿಸಿಎಲ್ ಮುಂಬಯಿ ತಂಡ ತಮಿಳುನಾಡಿನ ತೂತುಕುಡಿಯ ದೊರೈ ಸಿಂಗಂ ತಂಡವನ್ನು 36-20 ಪಾಯಿಂಟ್ ಗಳಿಂದ ಮಣಿಸಿತು.
ದಿನದ ಇತರ ಪಂದ್ಯಗಳಲ್ಲಿಬಲಿಷ್ಠ ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡ ನಾಗಪುರದ ಝೀರೋ ಮೈಲ್ ಅಕಾಡೆಮಿ ತಂಡವನ್ನು 49-21 ಅಂಕಗಳಿಂದ, ಐಸಿಎಫ್ ಚೆನ್ನೈ ತಂಡ ಉಮಾಮಹೇಶ್ವರಿ ಬೆಂಗಳೂರು ತಂಡವನ್ನು 43-19 ಅಂಕಗಳಿಂದ, ಫ್ರೆಂಡ್ಸ್ ಕ್ಲಬ್ ಕಡಬ ತಂಡವು ತಮಿಳುನಾಡು ತೂತುಕುಡಿಯ ದೊರೈ ಸಿಂಗಂ ತಂಡವನ್ನು 24-16 ಅಂಕಗಳಿಂದ, ಮುಂಬಯಿ ಪೋರ್ಟ್ ತಂಡ ಆರ್ಡಿನೆನ್ಸ್ ಫ್ಯಾಕ್ಟರಿ ತಂಡವನ್ನು 46-22 ಅಂಕಗಳಿಂದ, ಟಿಎಂಸಿ ಥಾಣೆ ತಂಡ ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡವನ್ನು 31-30 ಅಂಕಗಳಿಂದ ಪರಾಭವಗೊಳಿಸಿದವು.
ಫೊಟೋ: 4ಎಸ್ ಯುಎಲ್ -ಕಬಡ್ಡಿ
ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ ಷಿಪ್ ಗೆ ಸುಳ್ಯದಲ್ಲಿಶನಿವಾರ ಚಾಲನೆ ನೀಡಲಾಯಿತು.