ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳು

Contributed by: crastalp19@gmail.com|Vijaya Karnataka•
rise of infectious diseases 464 deaths in a short span
ವಿಕ ಸುದ್ದಿಲೋಕ ಕಾಸರಗೋಡು

ರಾಜ್ಯದಲ್ಲಿ 274 ದಿನಗಳಲ್ಲಿಸಾಂಕ್ರಾಮಿಕರೋಗದಿಂದಾಗಿ 464 ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಪ್ರಾಥಮಿಕ ವರದಿಯು ವ್ಯಕ್ತಪಡಿಸುತ್ತಿದೆ. ಸೆ. 30ರಂದು ಮಾತ್ರವಾಗಿ 7,628 ಮಂದಿ ಜ್ವರದಿಂದಾಗಿ ಚಿಕಿತ್ಸೆ ಪಡೆದಿದ್ದಾರೆ. 1,332 ಮಂದಿಗೆ ಇಲಿಜ್ವರ ಶಂಕಿಸಿದ್ದು, 95 ಮಂದಿಗೆ ರೋಗ ಖಚಿತಪಡಿಸಲಾಗಿದೆ.
ಜ. 1ರಿಂದ ಸೆ. 30ರ ವರೆಗಿನ 274 ದಿನಗಳ ಮಧ್ಯೆ ಇಲಿಜ್ವರದಿಂದ 114 ಮಂದಿ ಮೃತಪಟ್ಟಿದ್ದಾರೆ. 11,174 ಪ್ರಕರಣಗಳು ದಾಖಲಾಗಿವೆ. 2,404 ಮಂದಿಗೆ ರೋಗ ಖಚಿತಪಡಿಸಲಾಗಿದೆ. ಎಚ್ ವನ್ ಎನ್ ವನ್ ಸಾಂಕ್ರಾಮಿಕ ರೋಗದಿಂದ 120 ಮಂದಿ ಮೃತಪಟ್ಟಿದ್ದಾರೆ. 2,194 ಮಂದಿಗೆ ರೋಗ ಖಚಿತಪಡಿಸಲಾಗಿದೆ. 1,335 ಮಂದಿ ನಿರೀಕ್ಷಣೆಯಲ್ಲಿದ್ದಾರೆ.

ಅಮೀಬಿಕ್ ಮೆದುಳು ಜ್ವರ ಕಾರಣ 177 ಪ್ರಕರಣಗಳಲ್ಲಿ44 ಮರಣ ವರದಿಯಾಗಿದೆ. ಮರಣ ಸಂಖ್ಯೆ ಶೇ. 25 ಎಂಬುದು ಆತಂಕಜನಕವಾಗಿದೆ ಎಂದು ಆರೋಗ್ಯ ಇಲಾಖೆಯು ವ್ಯಕ್ತಪಡಿಸುತ್ತಿದೆ.

ಡೆಂಗ್ಯೂ ಜ್ವರದಿಂದ 43 ಮಂದಿ ಮೃತಪಟ್ಟಿದ್ದಾರೆ. 5,925 ಮಂದಿಗೆ ರೋಗ ಖಚಿತಪಡಿಸಲಾಗಿದೆ. 9,309 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ಹುಲ್ಲು, ಕಾಡು-ಪೊದೆಗಳಲ್ಲಿಬದುಕುವ ಹುಳುವಿನ ಕಡಿತಕ್ಕೊಳಗಾಗಿ ಸ್ಕೆ್ರತ್ರೖಬ್ ಟೈಫಸ್ ಜ್ವರದಿಂದ 43 ಮಂದಿ ಮೃತಪಟ್ಟಿದ್ದಾರೆ. 11,573 ಪ್ರಕರಣಗಳು ವರದಿಯಾಗಿವೆ. ಹಳದಿಕಾಮಲೆ ಬಾಧಿಸಿ ಒಂಬತ್ತು ಮಂದಿ, ಜ್ವರದಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. 15 ಮಂದಿ ರೇಬೀಸ್ ನಿಂದ ಮೃತಪಟ್ಟಿದ್ದಾರೆ.

ಗತ ವರ್ಷವನ್ನು ಹೋಲಿಸಿದರೆ ಇಲಿಜ್ವರ, ಸಾಂಕ್ರಾಮಿಕ ಜ್ವರ ಮರಣಗಳು ದುಪ್ಪಟ್ಟಾಗಿವೆ. ಲ್ಯಾಬ್ ಟೆಸ್ಟ್ ಗಳಿಗೆ ಹಾಗೂ ಡೆತ್ ಆಡಿಟ್ ನ ಬಳಿಕ ಮರಣ ಸಂಖ್ಯೆಯು ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಹರಡುತ್ತಿದೆ ವೈರಲ್ ಜ್ವರ : ಜಿಲ್ಲೆಯಲ್ಲಿವೈರಲ್ ಜ್ವರ ಹಾಗೂ ಇತರ ರೋಗಗಳು ಹರಡುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿಮೊದಲಾಗಿ ನೂರಾರು ಮಂದಿ ಚಿಕಿತ್ಸೆ ಅರಸಿ ಬರುತ್ತಿದ್ದಾರೆ. ರೋಗ ಹರಡುವಾಗ ಪ್ರತಿರೋಧಕ ಪ್ರಕ್ರಿಯೆಗಳು ವಿಫಲವಾಗುತ್ತಿವೆ. ಮಹಿಳೆಯರು, ಮಕ್ಕಳು ವೃದ್ಧರು ಮೊದಲಾಗಿ ವೈರಲ್ ಜ್ವರದಿಂದ ದೈನಂದಿನ ನೂರಾರು ಮಂದಿ ಜಿಲ್ಲಾಸರಕಾರಿ ಆಸ್ಪತ್ರೆ, ಜನರಲ್ ಆಸ್ಪತ್ರೆಯಲ್ಲಿಚಿಕಿತ್ಸೆ ಅರಸಿ ಬರುತ್ತಾರೆ. ಜಿಲ್ಲೆಯ ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಅರಸಿ ಬರುವವರ ಸಂಖ್ಯೆಯಲ್ಲಿಕೊರತೆ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿಅಗತ್ಯ ವೈದ್ಯರಿಲ್ಲದಿರುವುದು ಜ್ವರ ಬಾಧಿತರನ್ನು ಸಮಸ್ಯೆಗೊಳಪಡಿಸುತ್ತಿದೆ. ಔಷಧಿ ಕೊರತೆಯು ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿವೈದ್ಯರ ಕೊರತೆ ಇರುವುದರಿಂದ ವೈದ್ಯರ ತಪಾಸಣಾ ಕೊಠಡಿಯ ಮುಂಭಾಗದಲ್ಲಿದೀರ್ಘ ಸಾಲು ನಿತ್ಯ ದೃಶ್ಯವಾಗುತ್ತಿದೆ. ಗಂಟೆಗಟ್ಟಲೆ ವೈದ್ಯರನ್ನು ಕಾದು ಸುಸ್ತಾಗುವ ರೋಗಿಗಳ ಸಂಖ್ಯೆಯು ಕಡಿಮೆ ಇಲ್ಲ.

ಚಿತ್ರ: 3ಕೆಎಸ್ ಎಲ್ ಜ್ವರ