ಸಮರ್ಪಕ ಸಂಗ್ರಹ, ವಿಲೇಗೆ ಒತ್ತಾಯ

Contributed by: vjrajesh2011@gmail.com|Vijaya Karnataka•
sdpis pressure for improvement in waste collection and disposal system in alduru village
ಸಮರ್ಪಕ ಸಂಗ್ರಹ, ವಿಲೇಗೆ ಒತ್ತಾಯ

ಎಸ್ ಡಿಪಿಐನಿಂದ ಆಲ್ದೂರು ಪಿಡಿಒಗೆ ಮನವಿ
ವಿಕ ಸುದ್ದಿಲೋಕ ಆಲ್ದೂರು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಕಸ ಸಂಗ್ರಹ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿಎಸ್ ಡಿಪಿಐ ಆಲ್ದೂರು ಗ್ರಾಮ ಸಮಿತಿ ಪದಾಧಿಕಾರಿಗಳು ಪಿಡಿಒಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಟ್ರ್ಯಾಕ್ಟರ್ ನಲ್ಲಿಕಸ ಸಂಗ್ರಹಿಸುತ್ತಿದ್ದು, ಧ್ವನಿವರ್ಧಕದ ವ್ಯವಸ್ಥೆ ಇಲ್ಲದ ಕಾರಣ ವಾಹನ ಯಾವ ಸಮಯಕ್ಕೆ, ಯಾವ ಪ್ರದೇಶಕ್ಕೆ ಬರುತ್ತದೆ ಎಂಬ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ ಸಮರ್ಪಕವಾಗಿ ಕಸ ಸಂಗ್ರಹಿಸುತ್ತಿಲ್ಲಎಂದು ಪಿಡಿಒ ಗಮನಕ್ಕೆ ತಂದರು.

ಪ್ರತಿ ವಾರ್ಡ್ ನಲ್ಲೂಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಬೇಕು, ಟ್ರ್ಯಾಕ್ಟರ್ ಗೆ ಧ್ವನಿವರ್ಧಕ ಆಳವಡಿಸಿ ಕಸ ಸಂಗ್ರಹಿಸುವ ಸಮಯ ಹಾಗೂ ಮಾರ್ಗವನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕು. ಈ ಸಮಸ್ಯೆ ಮುಂದುವರಿದಲ್ಲಿಎಸ್ ಡಿಪಿಐನಿಂದ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಎಸ್ ಡಿಪಿಐ ಅಧ್ಯಕ್ಷ ಇಮ್ರಾನ್ ಅನ್ಸ್ ರ್ , ಕಾರ್ಯದರ್ಶಿ ರಿಯಾಜ್ , ಸಹಕಾರ್ಯದರ್ಶಿ ಮನ್ಸೂರ್ , ಕೋಶಾಧಿಕಾರಿ ಜಿಶಾನ್ ಇದ್ದರು.

4ಆಲ್ದೂರು-1

ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿಸಮರ್ಪಕವಾಗಿ ಕಸ ಸಂಗ್ರಹ ಹಾಗೂ ವಿಲೇವಾರಿ ಮಾಡಬೇಕು ಎಂದು ಎಸ್ ಡಿಪಿಐ ಪದಾಧಿಕಾರಿಗಳು ಪಿಡಿಒಗೆ ಮನವಿ ಸಲ್ಲಿಸಿದರು.