ಪತ್ರ

Contributed by: Harsha Vardhana|Vijaya Karnataka•
simplifying the dasara festival a worthy approach in the face of drought
ಸರಳತೆ ಮೆರೆಯಲಿ ದಸರಾ

ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಅದು ನಾಡಿನ ಸಂಪ್ರದಾಯ ಹಾಗೂ ಪರಂಪರೆಯೂ ಹೌದು. ಆದರೆ, ರಾಜ್ಯದಲ್ಲಿಈ ವರ್ಷ ಭೀಕರ ಬರಗಾಲ ತೋರಿ ಜನರು ಸಂಕಷ್ಟದಲ್ಲಿರುವಾಗ ಕೋಟ್ಯಂತರ ರೂ. ವೆಚ್ಚ ಮಾಡುವುದಕ್ಕಿಂತ ದಸರಾ ಉತ್ಸವವನ್ನು ಸರಳವಾಗಿ ಮಾಡುವುದು ಸೂಕ್ತ ಹಾಗೂ ಅರ್ಥಪೂರ್ಣವಾದುದು. ಸರಕಾರ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳಿಗೆ ಆಮಂತ್ರಣ ನೀಡುವ ಸಲುವಾಗಿ ಬಂದ ಮೈಸೂರು ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ಮೈಸೂರು ಭಾಗದ ಬರಗಾಲ ಪರಿಸ್ಥಿತಿ ಬಗ್ಗೆ ಸ್ವಾಮೀಜಿಗಳು ಕೇಳಿದ್ದು ಪರಿಸ್ಥಿತಿಯ ಗಂಭೀರತೆಯ ದ್ಯೋತಕ. ಅಲ್ಲದೆ ಮೈಸೂರು ಭೇಟಿ ಸಂದರ್ಭ ಡಿ.ಕೆ.ಶಿವಕುಮಾರ್ ಜನ ಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆಯಲ್ಲಿಫ್ಲೆಕ್ಸ್ ಹಾಗೂ ತಮ್ಮ ಪೋಟೋಗಳನ್ನು ಹಾಕದೆ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿರುವುದು ಸ್ವಾಗತಾರ್ಹ. ಅದೇ ಆಶಯವನ್ನು ಇಡೀ ದಸರಾ ಆಯೋಜನೆಯಲ್ಲಿಯೂ ಅಳವಡಿಸಿಕೊಂಡರೆ ಅದರ ಮೆರುಗು ಹೆಚ್ಚುವುದರಲ್ಲಿಸಂಶಯವಿಲ್ಲ.
- ವಿ.ಜಿ.ಇನಾಮದಾರ ಸಾರವಾಡ