ವಿಕ ಸುದ್ದಿಲೋಕ ಕೊಟ್ಟೂರು‘‘12ನೇ ಶತಮಾನದ ಬಸವಾದಿ ಶರಣರು ಕೇವಲ ವಚನಕಾರರಲ್ಲದೇ ಜಗತ್ತಿನ ಸರ್ವ ಶ್ರೇಷ್ಠ ತತ್ವ ಜ್ಞಾನಿಗಳಾಗಿದ್ದರು,’’ ಎಂದು ರೇಣುಕ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಎಂ.ಎಂ.ಜೆ ಶರತ್ ಚಂದ್ರ ಹೇಳಿದರು.
ಪಟ್ಟಣದ ಶ್ರೀಕೋಲಶಾಂತೇಶ್ವರ ಪ್ರೌಢ ಶಾಲೆಯಲ್ಲಿತಾಲೂಕು ಶಸಾಪ ಆಯೋಜಿಸಿದ್ದ ಲಿಂ. ಶರಣಯ್ಯ ಹಿರೇಮಠ ಮಹಾಮನೆ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಸಾಪ ಕಾರ್ಯ ಮಾದರಿ:
‘‘ಬಸವಾದಿ ಪ್ರಮಥರ ವಚನಗಳನ್ನು ಅವಲೋಕಿಸಿದಾಗ ಅವುಗಳನ್ನು ವೈಚಾರಿಕತೆ, ವೈಜ್ಞಾನಿಕ, ನೈತಿಕ ಹಾಗೂ ಸಾಮಾಜಿಕ ಅಂಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡರೆ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಲಿದೆ. ಶರಣರು ವಚನಗಳ ಮೂಲಕ ಸಾಮಾಜಿಕ ಸಮಾನತೆ ಸಾರಿದ್ದರಲ್ಲದೇ ಅದರಂತೆ ತಾವೂ ನಡೆದುಕೊಂಡಿದ್ದರು. ಅಂತಹ ವಚನಕಾರರ ವಚನಗಳನ್ನು ಪ್ರಸ್ತುತ ದಿನಗಳಲ್ಲಿಎಲ್ಲರಿಗೂ ಪರಿಚಯಿಸುತ್ತಿರುವ ಶಸಾಪ ಕಾರ್ಯ ಶ್ಲಾಘನೀಯ,’’ ಎಂದು ಹೇಳಿದರು.
ಶರಣರ ಮಾರ್ಗದಲ್ಲಿನಡೆಯಿರಿ:
ಶಸಾಪ ಜಿಲ್ಲಾಕಾರ್ಯದರ್ಶಿ ಎನ್ .ಎಂ. ರವಿಕುಮಾರ ಮಾತನಾಡಿ, ‘‘ಗಾಂಧೀಜಿಯವರು ರಾಮ ರಾಜ್ಯ ಪರಿಕಲ್ಪನೆ ಹಾಗೂ ಡಾ.ಬಿ.ಆರ್ .ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣದ ಕನಸು ನನಸಾಗಬೇಕಾದರೆ ಶರಣರು ತೋರಿಸಿದ ಮಾರ್ಗದಲ್ಲಿನಡೆಯಬೇಕು. ಆಗ ಮಾತ್ರ ದೇಶದ ಉತ್ತಮ ನಾಗರಿಕರಾಗಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಶರಣರು ತಮ್ಮ ಕಾಲಕ್ಕೆ ಮಾತ್ರವಲ್ಲದೇ ಭವಿಷ್ಯದ ಜಗತ್ತನ್ನು ಗಮನದಲ್ಲಿರಿಸಿಕೊಂಡು ವಚನಗಳನ್ನು ರಚಿಸಿದ್ದರು,’’ ಎಂದು ಸ್ಮರಿಸಿದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಸುಜಾತ ಶರಣಯ್ಯರ ದತ್ತಿ ಸ್ಮರಣೆ ಮಾಡಿದರು. ಕೆನರಾ ಬ್ಯಾಂಕ್ ನ ಅನೂಪ್ ಹಿರೇಮಠ, ಕುಕನೂರು ಪ್ರೌಢ ಶಾಲೆ ಶಿಕ್ಷಕ ಬಸವರಾಜ ಬಿ.ಚಿಂಚಲಿ ಶರಣಯ್ಯರ ಜೀವನ ಸಾಧನೆ, ಆದರ್ಶ ಕುರಿತು ಮಾತನಾಡಿದರು.
ಥಿಯಾಸಫಿಕಲ್ ಲಾಡ್ಜ್ ಕಾರ್ಯದರ್ಶಿ ಜೆ.ಎಂ.ಧನಂಜಯ, ತಾಲೂಕು ಶಸಾಪ ಅಧ್ಯಕ್ಷ ದೇವರಮನಿ ಕರಿಯಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಎಸ್ ..ವೀರೇಶ, ಶಿಕ್ಷಕ ಮತ್ತಿಹಳ್ಳಿ ನಾಗರಾಜ, ದತ್ತಿ ದಾಸೋಹಿಗಳಾದ ಸ್ನೇಹಾ, ಎಚ್ .ಎಂ.ಅನುಷಾ, ಬಿ.ಎಂ.ವಿನಯಕುಮಾರ್ , ಶಸಾಪ ಉಪಾಧ್ಯಕ್ಷೆ ಎಸ್ .ಎಂ. ನಳಿನಾ, ಖಚಾಂಚಿ ಅಂಗಡಿ ಚಂದ್ರಣ್ಣ, ಸಹ ಕಾರ್ಯದರ್ಶಿ ಜಿ.ಸಿದ್ದಣ್ಣ, ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ಡಿ.ಮಂಗಳಾ, ಖಜಾಂಚಿ ವಿ. ಅನುರಾಧ, ತಾಲೂಕು ಶಸಾಪ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ ಇದ್ದರು.
ವಿಎನ್ ಆರ್ 19ಕೆಟಿಆರ್ 1: ಕೊಟ್ಟೂರಿನ ಶ್ರೀ ಕೋಲ ಶಾಂತೇಶ್ವರ ಶಾಲೆಯಲ್ಲಿತಾಲೂಕು ಶ.ಸಾ.ಪ. ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಎಂಎಂಜೆ ಶರತ್ ಚಂದ್ರ ಉದ್ಘಾಟಿಸಿದರು.