ಹುಲಿವೇಷ, ಚೆಂಡೆ, ನಾಸಿಕ್ ವಾದನದ ಅಬ್ಬರಕ್ಕೆ ಕುಡ್ಲಸಜ್ಜು

Contributed by: dhanushkulal9@gmail.com|Vijaya Karnataka•
dussehra festival kudla decorated with various art troops parade
ನಾನಾ ರಾಜ್ಯ, ಜಿಲ್ಲಾಕಲಾ ತಂಡಗಳು * ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ

ಧನುಷ್ ಕುಲಾಲ್ ಶಕ್ತಿನಗರ
ಮಂಗಳೂರು ದಸರಾ ಮಹೋತ್ಸವದ ಅದ್ಧೂರಿ ಶೋಭಾಯಾತ್ರೆ ಬುಧವಾರ ನಗರದ ರಾಜಬೀದಿಗಳಲ್ಲಿಸಂಭ್ರಮದ ಅಲೆ ಎಬ್ಬಿಸಲಿದೆ. ನಾನಾ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಕಲಾತಂಡಗಳು, ಆಕರ್ಷಕ ಸ್ತಬ್ಧಚಿತ್ರಗಳು, ಹುಲಿವೇಷ , ಚೆಂಡೆ-ನಾಸಿಕ್ ವಾದನ ಹಾಗೂ ಬ್ಯಾಂಡ್ ಗಳ ನಾದ ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ.

ಮಂಗಳೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ; ಕರಾವಳಿಯ ಸಾಂಸ್ಕೃತಿಕ ವೈಭವ, ಕಲಾಪರಂಪರೆ, ಭಕ್ತಿ ಮತ್ತು ಸೌಹಾರ್ದದ ಪ್ರತೀಕ. ವಿವಿಧ ಸಂಘ-ಸಂಸ್ಥೆಗಳು ಸಿದ್ಧಪಡಿಸಿರುವ ಪೌರಾಣಿಕ, ಜಾನಪದ ಹಾಗೂ ವಿನೂತನ ಪರಿಕಲ್ಪನೆಗಳ ಸ್ತಬ್ಧಚಿತ್ರಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿವೆ.

ವೈವಿಧ್ಯಮಯ ಸ್ತಬ್ಧಚಿತ್ರಗಳು: ಮಂಗಳೂರು ದಸರಾ ಮಹೋತ್ಸವದ ಮೊದಲ ಮರ್ಯಾದೆಯ ತಂಡವೆಂಬ ಹೆಗ್ಗಳಿಕೆಯ ಮಂಜಲ್ ಬೈಲ್ ಫ್ರೆಂಡ್ಸ್ 76ನೇ ವರ್ಷದ ಸಂಭ್ರಮದಲ್ಲಿಹುಲಿವೇಷದ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಲಿದೆ. ಕಾಳಿಚರಣ್ ಫ್ರೆಂಡ್ಸ್ ಶಾರದಾ ದೇವಿ ಹಾಗೂ ಹುಲಿವೇಷದ ಟ್ಯಾಬ್ಲೋ, ಬರ್ಕೆ ಫ್ರೆಂಡ್ಸ್ ಕೇರಳದ ಸಾಂಸ್ಕೃತಿಕ ನೃತ್ಯ, ಶಾರದಾ ಸ್ತಬ್ಧಚಿತ್ರ ಮತ್ತು ನಾಸಿಕ್ ಬ್ಯಾಂಡ್ ಪ್ರದರ್ಶಿಸಲಿದೆ.

ಶಿವ ಫ್ರೆಂಡ್ಸ್ ದುರ್ಗಾದೇವಿಯ ದೃಶ್ಯರೂಪಕ, ಜೂನಿಯರ್ ಬಾಯ್ ್ಸ ಗುಬ್ಬಿ ಕುಣಿತ, ಯುವ ಸಂಗಮ್ ಶಾರದಾ ಮಾತೆ ಮತ್ತು ಹುಲಿಯ ಟ್ಯಾಬ್ಲೋ ಮೂಲಕ ಗಮನ ಸೆಳೆಯಲಿವೆ. ಓಂ ಸಾಯಿ ಫ್ರೆಂಡ್ಸ್ ನಾಗಕನ್ನಿಕೆಯ ಸ್ತಬ್ಧಚಿತ್ರ, ಪದುವಾ ಫ್ರೆಂಡ್ಸ್ ರಾಘವೇಂದ್ರ ಸ್ವಾಮಿಯ ರೂಪಕ ಹಾಗೂ ದೇವಾಲಯಗಳ ಮಾಹಿತಿ ನೀಡುವ ಎಲ್ ಇಡಿ ಟ್ಯಾಬ್ಲೋ ಪ್ರದರ್ಶಿಸಲಿದೆ.

ಬಿರುವೆರ್ ಕುಡ್ಲತಂಡದ ಕಾರ್ನಿವಲ…, ಜಂಗಲ್ ಸಫಾರಿ, ಶಾರದಾ ಮಾತೆ ಮತ್ತು ಹುಲಿವೇಷದ ನಾಲ್ಕು ಟ್ಯಾಬ್ಲೋಗಳು ವಿಶೇಷ ಆಕರ್ಷಣೆಯಾಗಲಿವೆ. ಕುಡ್ಲಬ್ರದರ್ಸ್ ಕೃಷ್ಣಲೀಲೆ ಹಾಗೂ ಕೇರಳದ ವಯಲಿನ್ ಸಂಗೀತವನ್ನು ಬಿಂಬಿಸಲಿದೆ.

ಬಲ್ಲಾಳ್ ಭಾಗ್ ಫ್ರೆಂಡ್ಸ್ , ಗ್ರೀನ್ ಪಾರ್ಕ್ ಫ್ರೆಂಡ್ಸ್ , ಸತ್ಯಸಾರಾಮಣಿ ವಿವೇಕ್ ಟೈಗರ್ಸ್ , ಬಲಿಪೆ ಫ್ರೆಂಡ್ಸ್ , ತುಳುನಾಡ ಬಿರುವೆರ್ , ಜವನೆರ್ ಕುಡ್ಲ, ಕುಡ್ಲಫ್ರೆಂಡ್ಸ್ , ರೈಸಿಂಗ್ ಫ್ರೆಂಡ್ಸ್ , ಟೀಮ್ ಅವತಾರ್ ಮತ್ತು ಕಾಲ ಭೈರವ ಫ್ರೆಂಡ್ಸ್ ಹುಲಿವೇಷದ ವಿವಿಧ ಟ್ಯಾಬ್ಲೋಗಳೊಂದಿಗೆ ಮೆರವಣಿಗೆಯಲ್ಲಿಪಾಲ್ಗೊಳ್ಳಲಿವೆ. ಟೀಮ್ ತಾಂಡವದ ಶಿವನ ರೂಪಕ, ಕುಡ್ಲಕುಲಾಲೆರ್ ಚಾರಿಟೆಬಲ್ ಸೇವಾ ಟ್ರಸ್ಟ್ ನ ಸ್ತಬ್ಧಚಿತ್ರ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಶಕ್ತಿಯ ದೇವರ ಮೂರ್ತಿಯ ಟ್ಯಾಬ್ಲೋ ಕೂಡ ಮೆರುಗು ನೀಡಲಿವೆ.

ಕುಡ್ಲಬ್ರದರ್ಸ್ ತಂಡವು ಕೃಷ್ಣಲೀಲೆಯ ಕುರಿತಾದ ವಿನೂತನ ದೃಶ್ಯರೂಪಕದೊಂದಿಗೆ ಕೇರಳದ ವಯಲಿನ್ ಸಂಗೀತವನ್ನು ಬಿಂಬಿಸುವ ಟ್ಯಾಬ್ಲೋವನ್ನು ಪ್ರಸ್ತುತಪಡಿಸಲಿದೆ. ಬಲಿಪೆ ಫ್ರೆಂಡ್ಸ್ ಹಾಗೂ ತುಳುನಾಡ ಬಿರುವೆರ್ ತಂಡಗಳು ಹುಲಿವೇಷದ ಟ್ಯಾಬ್ಲೋಗಳೊಂದಿಗೆ ಭಾಗವಹಿಸಲಿವೆ.

ಕಲಾವೈಭವಕ್ಕೆ ಕ್ಷಣಗಣನೆ: ತಿಂಗಳುಗಳ ಪರಿಶ್ರಮದಲ್ಲಿಸಿದ್ಧಗೊಂಡಿರುವ ಸ್ತಬ್ಧಚಿತ್ರಗಳು, ಜಾನಪದ ನೃತ್ಯಗಳು ಮತ್ತು ವಾದ್ಯಗಳ ನಾದದೊಂದಿಗೆ ಮಂಗಳೂರು ದಸರಾ ಶೋಭಾಯಾತ್ರೆ ಭಕ್ತಿ, ಪರಂಪರೆ ಹಾಗೂ ಸೃಜನಶೀಲತೆಯ ಸಂಗಮವಾಗಿ ಮೂಡಿಬರಲಿದೆ. ದಸರಾ ಸಂಭ್ರಮದಲ್ಲಿಮಿಂದೇಳಲು ನಗರ ಸಜ್ಜಾಗಿದೆ.

ಕೋಟ್

ಮಂಗಳೂರು ದಸರಾ ಮಹೋತ್ಸವ ವೈಭವದ ಶೋಭಾಯಾತ್ರೆಯಲ್ಲಿ50ಕ್ಕೂ ಅಧಿಕ ಸ್ತಬ್ಧಚಿತ್ರಗಳು, 20ಕ್ಕೂ ಅಧಿಕ ನಾನಾ ಜಿಲ್ಲೆಯ ಕಲಾತಂಡಗಳು, ಬ್ಯಾಂಡ್ , ಸಂಗೀತ ಸೇರಿದಂತೆ ನಾನಾ ತಂಡಗಳು ಜನಮನಸೂರೆಗೊಳಿಸಲಿವೆ. ಈ ಬಾರಿಯೂ 1ಲಕ್ಷಕ್ಕೂ ಅಧಿಕ ಪ್ರವಾಸಿಗರು ವೈಭವದ ದಸರಾ ಮಹೋತ್ಸವಕ್ಕೆ ಆಗಮಿಸುವ ಸಾಧ್ಯತೆಯಿದೆ.

-ಪದ್ಮರಾಜ್ ಆರ್ ., ಕೋಶಾಧಿಕಾರಿಗಳು, ಕುದ್ರೋ ಕ್ಷೇತ್ರ