Nagendra Prasads Son Utsav Prasad Makes His Debut With The Film Shubhalabh
ನಾಗೇಂದ್ರ ಪ್ರಸಾದ್ ಪುತ್ರನ ಎಂಟ್ರಿ
Contributed by: Kiran Mr. Kumar|Vijaya Karnataka•
ಇಂಟ್ರೋ
ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಪುತ್ರ ಉತ್ಸವ್ ಪ್ರಸಾದ್ ಸಿನಿಮಾ ಎಂಟ್ರಿಗೆ ಅಪ್ಪನದ್ದೇ ಡೈರೆಕ್ಷನ್ . ‘ಶುಭಲಾಭ’ ಶೀರ್ಷಿಕೆಯ ಈ ಸಿನಿಮಾ ಸೋಮವಾರ ಮುಹೂರ್ತ ಕಂಡಿದೆ.- ಲವಲವಿಕೆ ಸುದ್ದಿ
ಧಿಧಿಧಿಧಿಧಿಧಿಧಿಧಿಧಿಧಿ----------------
ನವರಾತ್ರಿಯ ಸಂಭ್ರಮದಲ್ಲಿಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಶುಭಲಾಭ’ ಚಿತ್ರದ ಮುಹೂರ್ತ ನೆರವೇರಿದೆ. ಈ ಸಿನಿಮಾದ ಮೂಲಕ ನಾಗೇಂದ್ರ ಪ್ರಸಾದ್ ಪುತ್ರ ಉತ್ಸವ್ ಪ್ರಸಾದ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಡಾ. ವಿ.ನಾಗೇಂದ್ರ ಪ್ರಸಾದ್ ಸೋಮವಾರ ಮುದ್ದಿನಪಾಳ್ಯದ ಶ್ರೀಲಕ್ಷಿ ವೆಂಕಟೇಶ್ವರ ದೇವಸ್ಥಾನದಲ್ಲಿತಮ್ಮದೇ ನಿರ್ದೇಶನದ, ಮಗನ ಚೊಚ್ಚಲ ಸಿನಿಮಾದ ಹೊಸ ಚಿತ್ರದ ಮುಹೂರ್ತ ನೇರವೇರಿಸಿದ್ದಾರೆ. ಶುಭಲಾಭ ಚಿತ್ರದ ಮುಹೂರ್ತದಲ್ಲಿಲವ್ಲಿಸ್ಟಾರ್ ಪ್ರೇಮ್ ಆರಂಭ ಫಲಕಕ್ಕೆ ಸಾಕ್ಷಿಯಾದರೆ, ಹಿರಿಯ ನಿರ್ದೇಶಕ ಎಸ್ . ಮಹೇಂದರ್ ಕ್ಯಾಮೆರಾ ಚಾಲನೆ ನೀಡುವ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ. ಹಿರಿಯ ನಟ ದತ್ತಣ್ಣ ಮುಖ್ಯಪಾತ್ರದಲ್ಲಿದ್ದು, ಅವರೊಟ್ಟಿಗೆ ಉತ್ಸವ್ ಪ್ರಸಾದ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.
ವಿಜಯಾನಂದ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸುರೇಶ್ ಅರಸು ಸಂಕಲನ ಹಾಗೂ ಉಪ್ಪಿ ಛಾಯಾಗ್ರಹಣ ಈ ಸಿನಿಮಾಗೆ ಇರಲಿದೆ. ಚಿತ್ರದ ಚಿತ್ರೀಕರಣ ಬಿಜಾಪುರ, ಬದಾಮಿ, ಸಿಂದಗಿ, ಬಾಗಲಕೋಟೆ ಭಾಗದಲ್ಲಿನಡೆಯಲಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡುವ ಯೋಜನೆಯಲ್ಲಿದೆ ಚಿತ್ರತಂಡ.