(ಪ್ರತಿಭಟನೆ ಸುದ್ದಿಗೆ ಬಾಕ್ಸ್ ) ಆರ್ ಎಫ್ ಒ, ಸಿಬ್ಬಂದಿ ಅಮಾನತಿಗೆ ಒತ್ತಾಯ

Contributed by: maheshmadahalli.vk@gmail.com|Vijaya Karnataka•
negligence charges in bandipur tiger project is environmental and agricultural safety in jeopardy
ವಿಕ ಸುದ್ದಿಲೋಕ ಗುಂಡ್ಲುಪೇಟೆ

ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯಲ್ಲಿಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವ, ಆನೆ ದಂತ ನಾಪತ್ತೆಯಾಗಿರುವ ವಿಷಯದಲ್ಲಿನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿರುವ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಹೊನ್ನೂರು ಪ್ರಕಾಶ್ , ಮದ್ದೂರು ಆರ್ ಎಫ್ ಒ ಹಾಗೂ ಕ್ಷೇತ್ರ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು, ಅರಣ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
‘‘ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವುದು ಮತ್ತು ಮೃತ ಆನೆ ದಂತ ನಾಪತ್ತೆಯಾಗಿರುವುದಕ್ಕೆ ಮದ್ದೂರು ವಲಯ ಅರಣ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಕ್ಷೇತ್ರ ಸಿಬ್ಬಂದಿಯ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿ ಘಟನೆ ಬಗ್ಗೆ ತನಿಖೆ ನಡೆಸಬೇಕು. ಅದಕ್ಕೂ ಮೊದಲು ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕು. ಅರಣ್ಯ ಸಚಿವರು ರಾಜೀನಾಮೆ ನೀಡಬೇಕು,’’ ಎಂದು ಆಗ್ರಹಿಸಿದರು.

‘‘ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿಅಧಿಕಾರಿಗಳು ವಿಫಲರಾಗಿದ್ದಾರೆ. ಅದರ ಹೊಣೆಯನ್ನು ಸರಕಾರ ಮತ್ತು ಅರಣ್ಯ ಇಲಾಖೆ ಹೊರಬೇಕು. ವನ್ಯಜೀವಿಗಳ ರಕ್ಷಣೆಯ ಜತೆಗೆ ಅರಣ್ಯದಂಚಿನ ರೈತರ ಜೀವ, ಜಾನುವಾರು ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಆದರೆ, ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿಅರಣ್ಯ ಇಲಾಖೆಯ ನಿರ್ಲಕ್ಷ್ಯ ಪದೇ ಪದೆ ಕಂಡು ಬರುತ್ತಿದೆ. ಹೀಗಾಗಿ ಘಟನೆಗಳಿಗೆ ಸಂಬಂಧಪಟ್ಟವರು ನೈತಿಕ ಹೊಣೆ ಹೊರಲೇಬೇಕು,’’ ಎಂದು ಹೇಳಿಕೆಯಲ್ಲಿಒತ್ತಾಯಿಸಿದ್ದಾರೆ.

ಸಿಎಚ್ ಎನ್ 18 ಹೊನ್ನೂರು ಪ್ರಕಾಶ್ ಜಿಪಿಟಿ2