ಬರ ಪೀಡಿತ ಜಿಲ್ಲೆಘೋಷಣೆಗೆ ಒತ್ತಾಯ

Contributed byVIJAYKUMAR P|Vijaya Karnataka
demand to declare dharwad district as drought hit
ಬರ ಪೀಡಿತ ಜಿಲ್ಲೆಘೋಷಣೆಗೆ ಒತ್ತಾಯ

ವಿಕ ಸುದ್ದಿಲೋಕ ಹುಬ್ಬಳ್ಳಿ
ಧಾರವಾಡ ಜಿಲ್ಲೆಯಲ್ಲಿಸಮರ್ಪಕ ಮಳೆಯಾಗದೆ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಸಿದ್ದಣ್ಣ ತೇಜಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ, ಕಾರ್ಮಿಕ ಸಂಘಟನೆ ಮತ್ತು ಆಮ್ ಆದ್ಮಿ ಪಕ್ಷದ ವತಿಯಿಂದ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.

ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿಬೆಳೆ ಬಂದಿಲ್ಲ. ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳನ್ನು ಬರಪೀಡಿತದಿಂದ ಹೊರಗಿಟ್ಟಿರುವುದು ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಎಕರೆಗೆ 60 ರಿಂದ 70 ಸಾವಿರ ಖರ್ಚು ಮಾಡಿದ್ದರೂ ಹಾಕಿದ ಬಂಡವಾಳವೂ ಮರಳಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ‘ಅರೆಬರೆ ಬರಗಾಲ’ ಇದೆ ಎನ್ನುತ್ತಿದ್ದಾರೆ. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಅವರಿಗೂ ಬರ ಘೋಷಣೆಗೆ ಮನವಿ ಮಾಡಲಾಗಿದೆ ಎಂದರು.

ವಾರದ ಗಡುವು:

ಧಾರವಾಡ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸರಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ರಾಷ್ಟ್ರೀಯ ಹೆದ್ದಾರಿ ಬಂದ್ ಸೇರಿದಂತೆ ಹೋರಾಟ ನಡೆಸಲಾಗುವುದು. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಧಾರವಾಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಎಂದು ಘೋಷಣೆ ಮಾಡಬೇಕು ಎಂದು ಸಿದ್ದಣ್ಣ ತೇಜಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿರಮೇಶ ಬೋಸ್ಲೆ, ಹುಸೇನಭಾಷಾ ತಳೆವಾಡ, ರವಿರಾಜ ಕಂಬಳಿ, ಸತೀಶ ಕಳ್ಳಿಮನಿ, ಶೇಖವ್ವ ಕೊಡತಗಿ, ಮೀನಾಕ್ಷಿ ತುರಮರಿ, ನಾಸೀರಅಹ್ಮದ ಮುಲ್ಲಾ, ನಿಂಗಪ್ಪ ಧಾರವಾಡ, ನಾಗಪ್ಪ ಧಾರವಾಡ ಇತರರಿದ್ದರು.