ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆ

Contributed byasmysvkr@gmail.com|Vijaya Karnataka
inauguration of commercial mall building new sports and cultural association in piriya patta
ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆ

ವಿಕ ಸುದ್ದಿಲೋಕ ಪಿರಿಯಾಪಟ್ಟಣ
ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾಂಪೌಂಡ್ ನಿರ್ಮಾಣಕ್ಕೆ ಬಾಕಿ ಉಳಿದಿರುವ ಅನುದಾನ ಮಂಜೂರು ಮಾಡಲು ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಶಾಸಕ ಕೆ.ಮಹದೇವ ತಿಳಿಸಿದರು.

ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾಂಪೌಂಡ್ ಮತ್ತು ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘‘ಪಿರಿಯಾಪಟ್ಟಣ ತಾಲೂಕಿನಲ್ಲಿಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಆರಂಭವಾಗಿರುವ ಈ ಸಂಘ ಮತ್ತಷ್ಟು ಅಭಿವೃದ್ಧಿ ಕಾಣಬೇಕು. ನನ್ನ ಅಧಿಕಾರ ಅವಧಿಯಲ್ಲಿಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿತ್ತು. ಜತೆಗೆ ಹಿಂದಿನ ಸಂಸದರಿಂದಲೂ ಅನುದಾನ ಬಿಡುಗಡೆಯಾಗಿ ಕಟ್ಟಡ ಕೂಡ ನಿರ್ಮಾಣವಾಗಿದೆ,’’ ಎಂದು ತಿಳಿಸಿದರು.

‘‘ಕಾಂಪೌಂಡ್ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರು 5 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಈಡೇರಿಲ್ಲಅದನ್ನು ಪುನರ್ ಪರಿಶೀಲಿಸಿ ಅನುದಾನ ನೀಡುವಂತೆ ಸೂಚಿಸಿದ್ದೇನೆ. ಸಂಘದ ಲೆಟರ್ ಹೆಡ್ ಮೂಲಕ ಮತ್ತೊಮ್ಮೆ ಮನವಿ ಮಾಡಲು ಅಧ್ಯಕ್ಷರಿಗೆ ತಿಳಿಸಿದ್ದೇನೆ,’’ ಎಂದು ತಿಳಿಸಿದರು.

ಅಧ್ಯಕ್ಷ ಕೆ. ರಮೇಶ್ ಮಾತನಾಡಿ, ‘‘ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನೂರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಮುಂದಿನ ದಿನಗಳಲ್ಲಿಬಾರ್ , ಸ್ವಿಮ್ಮಿಂಗ್ ಫೂಲ್ ಮಾಡುವ ಉದ್ದೇಶ ಹೊಂದಲಾಗಿದೆ. ನಮ್ಮ ಅವಧಿಯಲ್ಲಿಕಟ್ಟಡ ನಿರ್ಮಾಣ ಕಾಂಪೌಂಡ್ ನಿರ್ಮಾಣ ಸೇರಿದಂತೆ ದಾಖಲೆಗಳ ದಾಖಲೀಕರಣವನ್ನು ಕೂಡ ಮುಗಿಸಲಾಗಿದೆ. ಮುಂಬರುವ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು,’’ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಮಹದೇವ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷರು ಪಿ.ಬಿ. ಪೊನ್ನಪ್ಪ, ಕಾರ್ಯದರ್ಶಿ ಸಿ.ಎನ್ . ವಿಜಯ್ , ಖಜಾಂಚಿ ಟಿ. ಮಲ್ಲಿಕಾರ್ಜುನ, ಸಹ ಕಾರ್ಯದರ್ಶಿ ಪಿ.ಎಸ್ . ಹರೀಶ್ , ನಿರ್ದೇಶಕರಾದ ಎಸ್ .ಎನ್ . ಭುಜಂಗ, ವಿ.ಎನ್ . ಜ್ಯೋತಿ ಗೌಡ, ಕೆ.ಆರ್ . ಕೆಂಪಣ್ಣ, ಸಿ.ಕೆ.ಗೌರೀಶ್ , ಎನ್ .ಸಂತೋಷ್ , ಪಿ.ಎಂ. ವಿನೋದ್ ಇದ್ದರು.

ಪೋಟೋ:

ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾಂಪೌಂಡ್ ಮತ್ತು ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.