ಕಡಬ ಹಾಗೂ ಪುತ್ತೂರು ತಾಲೂಕಿನಲ್ಲಿಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರಗತಿ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆ ಹೊಸಮಜಲಿನ ಬಿರ್ವ ಹಾಲ್ ನಲ್ಲಿನಡೆಯಿತು.ಕ್ಲಬ್ ನ ಗೌರವಾಧ್ಯಕ್ಷ ಎಂ.ಕೆ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಎಸ್ .ಎಂ., ಗೌರವಾಧ್ಯಕ್ಷರಾಗಿ ಎಂ.ಕೆ. ಇಬ್ರಾಹಿಂ, ಉಪಾಧ್ಯಕ್ಷರಾಗಿ ಇರ್ಶಾದ್ ಹಾಗೂ ಸಿದ್ದೀಕ್ ಮಣ್ಣಗುಂಡಿ, ಕಾರ್ಯದರ್ಶಿಗಳಾಗಿ ಇರ್ಶಾದ್ ಎಂ. ಹಾಗೂ ಜಬ್ಬು, ಖಜಾಂಚಿಯಾಗಿ ಸಿದ್ದೀಕ್ ಜಿ.ಕೆ., ಮ್ಯಾನೇಜರ್ ಆಗಿ ಮುಜಾಹಿದ್ ಪಾಷ ಹಾಗೂ ತಂಡದ ನಾಯಕನಾಗಿ ಅನ್ಸಾರ್ ಗುಡ್ಡೆ ಆಯ್ಕೆಯಾದರು.
ಇರ್ಷಾದ್ ಸ್ವಾಗತಿಸಿದರು, ಸಿದ್ದೀಕ್ ಎಂ. ನಿರೂಪಿಸಿದರು. ಸಿದ್ದೀಕ್ ಜಿ.ಕೆ. ವಂದಿಸಿದರು.