ದೀಕ್ಷಾ ಭೂಮಿಗೆ ಪ್ರಯಾಣ ವ್ಯವಸ್ಥೆಗೆ ಆಹ್ವಾನಕಲಬುರಗಿ: 2026-27ನೇ ಸಾಲಿನಲ್ಲಿಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಗೆ ಭೇಟಿ ನೀಡುವ ಡಾ.ಬಿ.ಆರ್ . ಅಂಬೇಡ್ಕರ್ ಅನುಯಾಯಿಗಳಿಗೆ (ಯಾತ್ರಾರ್ಥಿಗಳಿಗೆ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದಕ್ಕಾಗಿ ಅರ್ಹ ಯಾತ್ರಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಬಿ.ಪಿ.ಎಲ್ . ಕಾರ್ಡ್ ಹೊಂದಿರಬೇಕು. ಯಾತ್ರಾರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಒಂದು ಕುಟುಂಬದಲ್ಲಿ2 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಇರುತ್ತದೆ. ಈಗಾಗಲೇ ಸರಕಾರದ ವೆಚ್ಚದಲ್ಲಿಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಈ ಸೌಲಭ್ಯಕ್ಕೆ ಅರ್ಹರಲ್ಲ. ಸರಕಾರಿ ಮತ್ತು ಅಂಗ ಸಂಸ್ಥೆಗಳಲ್ಲಿಸೇವೆಯಲ್ಲಿರುವವರು ಅರ್ಹರಿರುವುದಿಲ್ಲ. ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿ ಯಾತ್ರೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ, ರೈಲಿನ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕಲ್ಪಿಸಲಾಗುತ್ತಿದೆ. ದೀಕ್ಷಾ ಭೂಮಿಗೆ ಭೇಟಿ ನೀಡುವ ಅರ್ಹ ಯಾತ್ರಾರ್ಥಿಗಳು ಇಲಾಖೆಯ ಘ್ಕಿhಠಿಠಿps://sಡಿd.ka್ಟ್ಞaಠಿaka.ಜಟv.ಜ್ಞಿ ವೆಬ್ ಸೈಟ್ ನಲ್ಲಿಆನ್ ಲೈನ್ ಮೂಲಕ 2026ರ ಅ.9ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.