ಭೀಮಮಾರ್ಗ ಸಂಘಟನೆಗೆ ಆಯ್ಕೆ

Contributed byashadheemu1980@gmail.com|Vijaya Karnataka
Vijay Karnataka
ಭೀಮಮಾರ್ಗ ಸಂಘಟನೆಗೆ ಆಯ್ಕೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ರಾಷ್ಟ್ರೀಯ ಭೀಮಮಾರ್ಗ ಸಂಘಟನೆಯ ಕೆ.ಆರ್ .ನಗರ ತಾಲೂಕು ಅಧ್ಯಕ್ಷರಾಗಿ ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಸೋಮನಹಳ್ಳಿ ಶಿವಶೇಕರ್ ತಿಳಿಸಿದ್ದಾರೆ.

ಹುಣಸೂರು ತಾಪಂ ಸಭಾಂಗಣದಲ್ಲಿನಡೆದ ಸಭೆಯಲ್ಲಿಪ್ರಧಾನ ಕಾರ್ಯದರ್ಶಿಯಾಗಿ ಅನಿಲ…, ಗೌರವ ಅಧ್ಯಕ್ಷರಾಗಿ ಬೈರಾಜ…, ಉಪಾಧ್ಯಕ್ಷರಾಗಿ ಕಿರಣ್ , ಹರೀಶ್ , ನಗರ ಅಧ್ಯಕ್ಷರಾಗಿ ನಿತಿನ್ ಕುಮಾರ್ , ನಗರ ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ರಾಜೇಶ್ವರಿ, ಗೌರವಾಧ್ಯಕ್ಷರಾಗಿ ನಾಗರತ್ನ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ…, ಸುಜಯ…, ಗಂಗಾಧರ್ , ಜೈ ಶಂಕರ್ , ಎಸ್ .ರುಕ್ಮಿಣಿ, ಸಚಿನ್ , ರವಿಕುಮಾರ್ , ಸೋಹನ್ ಕುಮಾನ್ , ಹನುಮಯ್ಯ, ಹೊಸಳ್ಳಿ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಹೇಳಿಕೆಯಲ್ಲಿತಿಳಿಸಿದ್ದಾರೆ.

ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡಾ.ಅಂಬೇಡ್ಕರ್ ಪುತ್ಥಳಿಗೆ ಅರುಣ್ ಕುಮಾರ್ ಮಾಲಾರ್ಪಣೆ ಮಾಡಿ ಮಾತನಾಡಿ, ‘‘ನಮ್ಮ ಸಂಘಟನೆಯ ಉದ್ದೇಶ ಬಡವರು, ನೊಂದವರು, ಸಂಕಷ್ಟದಲ್ಲಿಸಿಲುಕಿದಾಗ ಅವರಿಗೆ ನೆರವಾಗುವ ಮೂಲಕ ಆತ್ಮಸ್ಥೈರ್ಯ ತುಂಬುವ, ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ,’’ ಎಂದರು.

///ಚಿತ್ರಶೀರ್ಷಿಕೆ///

ರಾಷ್ಟ್ರೀಯ ಭೀಮಮಾರ್ಗ ಸಂಘಟನೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್ ಅವರೊಂದಿಗೆ ನೂತನ ಪದಾಧಿಕಾರಿಗಳು.