ಚಪ್ಪರದಹಳ್ಳಿಯಲ್ಲಿಪೋಷಣ್ ಅಭಿಯಾನ

Contributed byasmysvkr@gmail.com|Vijaya Karnataka
Vijay Karnataka
ಚಪ್ಪರದಹಳ್ಳಿಯಲ್ಲಿಪೋಷಣ್ ಅಭಿಯಾನ

ವಿಕ ಸುದ್ದಿಲೋಕ ಪಿರಿಯಾಪಟ್ಟಣ
ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಹೇಳಿದರು.

ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘‘ಅಪೌಷ್ಟಿಕತೆ ತಡೆಗಟ್ಟಲು ಅಂಗನವಾಡಿ ಕೇಂದ್ರಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು,’’ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಕೆ. ಶ್ರೀದೇವಿ ಮಾತನಾಡಿ, ‘‘ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ರಕ್ಷಣೆಯಲ್ಲಿಪೌಷ್ಟಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಸರಕಾರದ ಪೋಷಣ್ ಅಭಿಯಾನದ ಉದ್ದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಕೈಜೋಡಿಸಬೇಕು,’’ ಎಂದರು.

ಕಾರ್ಯಕ್ರಮದಲ್ಲಿಅಂಗನವಾಡಿ ಮೇಲ್ವಿಚಾರಕಿ ಧನ್ಯರತಿ, ಕೋ-ಆರ್ಡಿನೇಟರ್ ಉಮೇಶ್ , ಆರೋಗ್ಯ ನಿರೀಕ್ಷಣಾಧಿಕಾರಿ ಎಚ್ .ಎಸ್ .ರವಿ, ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಕೆ. ಆಶಾ, ಎ.ಜೆ. ರತ್ನಾ, ಹೇಮಾ, ಸಾಕಮ್ಮ, ಸುಧಾ, ಗಾಯತ್ರಿ, ಜಯಂತಿ, ಸಹಾಯಕಿಯರಾದ ರಾಧಮ್ಮ, ಗೌರಮ್ಮ ಸೇರಿದಂತೆ ಸಿಬ್ಬಂದಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಪೋಟೋ

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಉದ್ಘಾಟಿಸಿದರು.