ಸಿರುಗುಪ್ಪ-ಸಹಕಾರ ಸಂಘದ ವಾರ್ಷಿಕ ಸಭೆ: ರೈತರ ಸಬಲೀಕರಣಕ್ಕೆ ಕರೆ

Contributed bypooja255647@gmail.com|Vijaya Karnataka
Vijay Karnataka
‘ನಿಗದಿತ ಅವಧಿಗೆ ಸಾಲ ಮರುಪಾವತಿ ಅವಶ್ಯ’

ವಿಕ ಸುದ್ದಿಲೋಕ ಸಿರುಗುಪ್ಪ
‘‘ಬ್ಯಾಂಕ್ ಗಳ ನಿಜವಾದ ಮಾಲೀಕರು ರೈತರೇ ಆಗಿದ್ದು, ಸಂಸ್ಥೆಯ ಆರ್ಥಿಕ ಭದ್ರತೆಗೆ ನಿಗದಿತ ಅವಧಿಯಲ್ಲಿಸಾಲ ಮರುಪಾವತಿಸುವುದು ಅಗತ್ಯ. ತಾಲೂಕನ್ನು ಮಾದರಿ ಸಹಕಾರ ತತ್ತ$್ವದಡಿ ಮತ್ತಷ್ಟು ಅಭಿವೃದ್ಧಿ ಮಾಡಲು ರೈತರ ಸಹಕಾರ ಮತ್ತು ಅಡಳಿತ ಮಂಡಳಿಗಳ ನಿಸ್ವಾರ್ಥ ಸೇವೆ ಹಾಗೂ ಸಿಬ್ಬಂದಿ ಸೇವೆ ಹೆಚ್ಚಾಗಿ ಅಗತ್ಯವಿದೆ,’’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಹೇಳಿದರು.

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ನಂ.2ರ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಮಾತನಾಡಿದರು.

‘‘ಏಷ್ಯಾ ಖಂಡದ ಮೊದಲ ಸಹಕಾರ ಸಂಘದ ಸ್ಥಾಪಕ ಸಿದ್ಧನಗೌಡ ಪಾಟೀಲರ ಸೇವೆ ಸ್ಮರಣೀಯ. ಶೇ.14 ಇದ್ದ ಬಡ್ಡಿದರ ಸದ್ಯ ರೈತ ಹೋರಾಟಗಳ ಫಲವಾಗಿ ಶೂನ್ಯಕ್ಕೆ ತಲುಪಿದೆ,’’ ಎಂದರು.

ಸಂಘದ ವಾರ್ಷಿಕ ವರದಿ, ಆದಾಯ-ಖರ್ಚು ಮತ್ತು ಮುಂದಿನ ಯೋಜನಾ ವೆಚ್ಚಗಳ ಕುರಿತು ಚರ್ಚಿಸಲಾಯಿತು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ನಾಚರಯ್ಯ, ಉಪಾಧ್ಯಕ್ಷ ವೈ.ಮುಕಣ್ಣ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರರೆಡ್ಡಿ, ತೆಕ್ಕಲಕೋಟೆ ಪಿಕೆಪಿಎಸ್ ಅಧ್ಯಕ್ಷ ಪಿ.ತಿಮ್ಮಪ್ಪ ಹಾಗೂ ನಿರ್ದೇಶಕರು, ಮುಖಂಡರು ಭಾಗವಹಿಸಿದ್ದರು.

**

ಬಿಎಲ್ ವೈ18ಎಸ್ ಜಿಪಿ3:

ಸಿರುಗುಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ನಂ.2ರ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಮಾತನಾಡಿದರು.