ಪ್ರಧಾನಿ ಮೋದಿ ಹುಟ್ಟುಹಬ್ಬ ನೆಟ್ಲದೇವಸ್ಥಾನದಲ್ಲಿವಿಶೇಷ ಪೂಜೆ

Contributed bymambadynews@gmail.com|Vijaya Karnataka
Vijay Karnataka
ವಿಕ ಸುದ್ದಿಲೋಕ ಬಂಟ್ವಾಳ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ವಿಶೇಷ ಮಹಾಪೂಜೆಯನ್ನು ಬಿಜೆಪಿಯ ಅಮ್ಟೂರು ಶಕ್ತಿ ಕೇಂದ್ರ ವತಿಯಿಂದ ಸಲ್ಲಿಸಲಾಯಿತು.
ಬಿಜೆಪಿಯ ಜಿಲ್ಲಾಕಾರ್ಯದರ್ಶಿ ದಿನೇಶ್ ಅಮ್ಟೂರು ನೇತೃತ್ವದಲ್ಲಿಶಕ್ತಿ ಕೇಂದ್ರದ ಕಾರ್ಯಕರ್ತÃ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ವಿಶೇಷ ಮಹಾಪೂಜೆ, ನಿತ್ಯ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ರಾವ್ ಪೂಜಾ ಕಾರ್ಯ ನೆರವೇರಿಸಿದರು.

ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಮಹಾಬಲ ಸಾಲಿಯನ್ ಮುಳಿಕೊಡಂಗೆ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್ , ಪ್ರಮುಖರಾದ ನವೀನ್ ಕೊಟ್ಟಾರಿ, ಗಂಗಾಧರ ಕುಲಾಲ್ , ಉಗ್ಗಪ್ಪ ಪೂಜಾರಿ, ಸೇಸಪ್ಪ ನಾಯ್ ್ಕ, ಧನಂಜಯ ಕುಮಾರ್ , ನಾರಾಯಣ ಗಟ್ಟಿ, ಸಂಜೀವ ನಾಯ್ ್ಕ, ವಿಜಯಕುಮಾರ್ , ನಿಶಾಂತ್ ಡಿ. ಅಮ್ಟೂರು ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ: 18ಬಿಎಚ್ ಅಮ್ಟೂರು