ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

Contributed bymandalamari84@gmail.com|Vijaya Karnataka
demand for president position for nomadic community
ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ಕುಷ್ಟಗಿ: ಹೊಸಪೇಟೆಯ ಸಣ್ಣ ಮಾರೆಪ್ಪ ಬುಡ್ಗಜಂಗಮ ಅವರಿಗೆ ಎಸ್ ಸಿ ಮತ್ತು ಎಸ್ ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕರ್ನಾಟಕ ನೈಜ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಶಿಂ ಶ್ರೀಶೈಲ ಹೇಳಿದರು. ಪಟ್ಟಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸಣ್ಣ ಮಾರೆಪ್ಪ ಅವರು ಅಲೆಮಾರಿ ಸಮುದಾಯಗಳ ಬಗ್ಗೆ ಅಕಾಳಜಿವುಳ್ಳವರಾಗಿದ್ದಾರೆ. ಅಲೆಮಾರಿ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ,’’ ಎಂದರು. ಶಿವಮೂರ್ತಿ, ಮಂಜುನಾಥ, ಟಿ.ವೆಂಕಯ್ಯ, ಟಿ.ಆಂಜನೇಯ ಇದ್ದರು.
---

19 ಕೆಎಸ್ ಟಿ ಪಿ03

ಸಣ್ಣ ಮಾರೆಪ್ಪ