ನಗೋಯಾ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಸೇರಿದಂತೆ ಭಾರತ ಶೂಟರ್ ಗಳ ತಂಡ ಭಾನುವಾರ ನಡೆಯಲಿರುವ ಏಷ್ಯನ್ ಗೇಮ್ಸ… ಶೂಟಿಂಗ್ ಸ್ಪರ್ಧೆಯಲ್ಲಿಸ್ಪರ್ಧಿಸಲಿದೆ. ಮನು, ಈಶಾ ಸಿಂಗ್ , ನೀರೂ ಒಳಗೊಂಡ 30 ಸದಸ್ಯರ ಬಲಿಷ್ಠ ತಂಡಕ್ಕೆ ಚೀನಾ ಪ್ರಮುಖ ಸವಾಲು ಒಡ್ಡುವ ಸಾಧ್ಯತೆ ಇದೆ.
ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ ನಲ್ಲಿಭಾರತೀಯ ಶೂಟರ್ ಗಳು 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ದಾಖಲೆಯ 22 ಪದಕಗಳನ್ನು ಗೆದ್ದಿದ್ದರು. ಈ ಋುತುವಿನಲ್ಲಿ, ವಿಶೇಷವಾಗಿ ರೈಫಲ್ ಮತ್ತು ಪಿಸ್ತೂಲ್ ವಿಭಾಗಗಳಲ್ಲಿ, ಭಾರತೀಯ ಶೂಟರ್ ಗಳ ಸ್ಥಿರ ಪ್ರದರ್ಶನವು ನಗೋಯಾದಲ್ಲಿನಡೆಯಲಿರುವ ಕೂಟದಲ್ಲಿಭಾರತದ ಪದಕ ಅಭಿಯಾನಕ್ಕೆ ತಂಡ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ಹೆಚ್ಚಿಸಿದೆ. ಈ ತಂಡದಲ್ಲಿಅನುಭವಿ ಒಲಿಂಪಿಯನ್ ಗಳು, ವಿಶ್ವಮಟ್ಟದ ಶೂಟರ್ ಗಳ ಜತೆಗೆ ಉದಯೋನ್ಮುಖ ಪ್ರತಿಭೆಗಳೂ ಸ್ಥಾನ ಪಡೆದಿದ್ದಾರೆ. ಆದರೆ ಮೂರನೇ ಬಾರಿ ಏಷ್ಯನ್ ಗೇಮ್ಸ್ ನಲ್ಲಿಕಣಕ್ಕಿಳಿದಿರುವ ಮನು ಭಾಕರ್ ಮೇಲೆಯೇ ಎಲ್ಲರ ಗಮನ ನೆಟ್ಟಿದೆ.ಮನು ಭಾಕರ್ ಮತ್ತು ಈಶಾ ಸಿಂಗ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಹಾಗೂ 25 ಮೀಟರ್ ಪಿಸ್ತೂಲ್ ಎರಡೂ ಸ್ಪರ್ಧೆಗಳಲ್ಲಿಭಾಗವಹಿಸಲಿದ್ದಾರೆ. ಇದರಿಂದ ಮಹಿಳೆಯರ ಪಿಸ್ತೂಲ್ ವಿಭಾಗಗಳಲ್ಲಿಭಾರತಕ್ಕೆ ಬಲಿಷ್ಠ ಜೋಡಿ ಲಭಿಸಿದೆ.