ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆಲತ್ತಿಂಜ ನಿವಾಸಿ, ಹಲವು ವರ್ಷಗಳ ಹಿಂದೆ ಹಿಂದೂ ಪರ ಸಂಘಟನೆಯಲ್ಲಿತೊಡಗಿಸಿಕೊಂಡಿದ್ದ ದಿವಂಗತ ಪಚ್ಚು ಕೊಕ್ಕಡ ಅವರ ತಾಯಿ ಹೊನ್ನಮ್ಮ ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಆರೋಗ್ಯದಲ್ಲಿಏರುಪೇರಾಗಿರುವ ಹಿನ್ನೆಲೆಯಲ್ಲಿಸೇವಾ ತಂಡದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.ತಂಡದ ಪ್ರಥಮ ಸೇವಾ ಯೋಜನೆಯ ಅಂಗವಾಗಿ ಸಂಗ್ರಹಿಸಲಾದ 70,910 ಮೊತ್ತವನ್ನು ಬುಧವಾರ ಹೊನ್ನಮ್ಮ ಅವರ ನಿವಾಸದಲ್ಲಿದಾನಿ ಗಣೇಶ್ ಗೌಡ ಕಲಾಯಿ ಹಾಗೂ ತಂಡದ ಸದಸ್ಯರು ಮತ್ತು ಹಿರಿಯರ ಸಮ್ಮುಖದಲ್ಲಿಹಸ್ತಾಂತರಿಸಲಾಯಿತು.