ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಮಂಗಳೂರು ಶಾಖೆ ಹಾಗೂ ದಿ ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಸಹಯೋಗದಲ್ಲಿಎಂಜಿನಿಯರ್ ಗಳ ದಿನಾಚರಣೆ ಹಾಗೂ ಟೆಕ್ನೋ ವೀಕ್ -2026 ಕಾರ್ಯಕ್ರಮ ನಗರದ ಭಾರತೀಯ ರೆಡ್ ಕ್ರಾಸ್ ನ ಪ್ರೇರಣಾ ಹಾಲ್ ನಲ್ಲಿಶನಿವಾರ ನಡೆಯಿತು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಮಂಗಳೂರು ನಗರಾಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದೇವೆ. ಎಂಜಿನಿಯರಿಂಗ್ ಅಸೋಸಿಯೇಷನ್ ನ ಸಹಕಾರ ಅಗತ್ಯ. ಅವರ ಬೇಡಿಕೆಗಳಿಗೆ ಪೂರಕವಾಗಿ ಮುಡಾ ಸ್ಪಂದಿಸುವ ಕೆಲಸ ಮಾಡಲಿದೆ. ಮುಡಾ ಲೇಔಟ್ ಎನ್ ಒಸಿ ಸಮಸ್ಯೆ, ಪಾರ್ಕ್ ಹಾಗೂ ಓಪನ್ ಸ್ಪೇಸ್ ಪ್ರಕ್ರಿಯೆ ಸರಳೀಕರಣಕ್ಕೆ ಸರಕಾರದ ಮಟ್ಟದಲ್ಲಿಪ್ರಯತ್ನಿಸುತ್ತೇನೆ ಎಂದರು.
ಎಸಿಸಿಇ(ಐ) ರಾಷ್ಟ್ರೀಯ ಅಧ್ಯಕ್ಷ ಕಲ್ಬಾವಿ ರಾಜೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಮ್ಕೋ ಸಿಮೆಂಟ್ ನ ಸೀನಿಯರ್ ಜನರಲ್ ಮ್ಯಾನೇಜರ್ ವಿನೋದ್ ಎ. ಸಂಸ್ಥೆಯ ಕುರಿತು ಮಾತನಾಡಿದರು.
ಎಂಜಿನಿಯರ್ ಗಳಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿಎಮಿನೆಂಟ್ ಎಂಜಿನಿಯರ್ ಅವಾರ್ಡ್ ನ್ನು ಕನ್ಸಲ್ಟಿಂಗ್ ಎಂಜಿನಿಯರ್ ಆ್ಯಂಡ್ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಶಂಕರನಾರಾಯಣ ಕೆ., ಎನ್ ಐಟಿಕೆ ಸುರತ್ಕಲ್ ನ ಸಿವಿಲ್ ಎಂಜಿನಿಯರ್ ವಿಭಾಗದ ಪ್ರೊ.ಡಾ.ಬಸವರಾಜ್ ಮನು ಅವರಿಗೆ ಪ್ರದಾನ ಮಾಡಲಾಯಿತು. ಅನಂತಮಿತ್ರ ಕಲ್ಬಾವಿ ಅವಾರ್ಡ್ ನ್ನು ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ದೇವದಾಸ್ ಕಾಮತ್ ಅವರಿಗೆ ಪ್ರದಾನ ಮಾಡಲಾಯಿತು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಮಂಗಳೂರು ಶಾಖೆ ಅಧ್ಯಕ್ಷ ಅರುಣ್ ರಾಜ್ , ಕಾರ್ಯದರ್ಶಿ ಸಂದೀಪ್ ರಾವ್ ಇಡ್ಯಾ, ಖಜಾಂಚಿ ಡಾ.ಚಿನ್ನಗಿರಿ ಗೌಡ, ಉಪಾಧ್ಯಕ್ಷ ಕಟ್ಟ ವೆಂಕಟರಮಣ, ಟೆಕ್ನೋ ವೀಕ್ ನ ಕನ್ವೀನರ್ ಪ್ರೇಮಾನಂದ ಸಾಲ್ಯಾನ್ , ಸುಬ್ರಹ್ಮಣ್ಯ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಅರುಣ್ ರಾಜ್ ಸ್ವಾಗತಿಸಿದರು. ಎಸಿಸಿಇ(ಐ) ರಾಷ್ಟ್ರೀಯ ಮಾಜಿ ಮುಖ್ಯ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.
ಫೊಟೋ: 19ಮ-ಎಂಜಿನಿಯರ್ಸ್
ಎಂಜಿನಿಯರ್ ದಿನಾಚರಣೆಯಲ್ಲಿಎಂಜಿನಿಯರ್ ಗಳಿಗೆ ಪ್ರಶಸ್ತಿ ನೀಡಲಾಯಿತು.