ಗಾಂಜಾ ಮಾರಾಟ: ಆಂಧ್ರ ವ್ಯಕ್ತಿಗೆ ಜೈಲು ಶಿಕ್ಷೆ

Contributed byGirish J.R|Vijaya Karnataka
jail sentence for cannabis sale report of a person from andhra pradesh
ವಿಕ ಸುದ್ದಿಲೋಕ ಬೆಂಗಳೂರು

ಗಾಂಜಾ ಮಾರಾಟ ಪ್ರಕರಣ ಸಂಬಂಧ ಟಿ.ಕುಮಾರ್ (55) ಎಂಬಾತನಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿದೆ.
ಆಂಧ್ರಪ್ರದೇಶದ ಚಿತ್ತೂರಿನ ಕುಮಾರ್ , 2022ರ ಆ.7ರಂದು ನಗರದ ನ್ಯೂ ಬಿಇಎಲ್ ರಸ್ತೆಯ ಎರಡನೇ ಕ್ರಾಸ್ ನ ಬೇಕರಿ ಬಳಿ ಗಾಂಜಾ ಮಾರಾಟ ಮಾಡುವ ಯತ್ನದಲ್ಲಿಸಂಜಯನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಬ್ಯಾಗ್ ನಲ್ಲಿಗಾಂಜಾ ತುಂಬಿಸಿಕೊಂಡು ಬಂದಿದ್ದ ಆತನನ್ನು ಪೊಲೀಸರು ಎನ್ ಡಿಪಿಎಸ್ ಕಾಯಿದೆಯಡಿ ಬಂಧಿಸಿದ್ದರು.

ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕುಮಾರ್ ಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.