ವಿವಿಧ ಮಠಗಳ ಜೈನ ಸ್ವಾಮೀಜಿಗಳು ಸೋಮವಾರ ವಿಧಾನಸೌಧದ ಮುಖ್ಯ ಮಂತ್ರಿ ಕೊಠಡಿಯಲ್ಲಿಸಿಎಂ ಡಿ. ಕೆ. ಶಿವ ಕುಮಾರ್ ಅವರನ್ನು ಭೇಟಿಯಾಗಿ ನಾನಾ ಬೇಡಿಕೆಗಳ ಮನವಿ ಸಲ್ಲಿಸಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಜೈನ ನಿಗಮ ಸೇರಿದಂತೆ ಇತರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಸ್ವಾಮೀಜಿ, ಸ್ವಸ್ತಿಶ್ರೀ ಧರ್ಮ ಸೇನ ಭಟ್ಟಾರಕರು ವರೂರು, ಹುಬ್ಬಳ್ಳಿ ಸ್ವಸ್ತಿಶ್ರೀ ಲಕ್ಷ್ಮೀ ಸೇನ ಭಟ್ಟಾರಕರು ಕೊಲ್ಲಾಪುರ, ಶ್ರೀ ಭಾನು ಕೀರ್ತಿ ಭಟ್ಟಾರಕರು ಕಂಬದ ಹಳ್ಳಿ ಭಾಗವಹಿಸಿದರು.
ರವಿ ಷೇಣ ಆಚಾರ್ಯ ರಚಿತ ಶ್ರೀ ಜೀವಂಧರ ಕುಮಾರ್ ಹೋತಪೇಟೆ ಅನುವಾದಗೊಂಡ ಅಧ್ಯಾತ್ಮ ಯೋಗಿ ಶ್ರೀ ರಾಮ ಶಾಸ್ತ್ರ ಗ್ರಂಥ ನೀಡಿ ಹರಸಿದರು. ಮಾಜಿ ಸಚಿವ ವೀರ ಕುಮಾರ್ ಪಾಟೀಲ್ , ಪುತ್ರ ಡುಮ್ , ವಿನೋದ್ ದೊಡ್ಡಣ್ಣ ವರ್ , ರಾಜಕೀರ್ತಿ ಅರುಣ್ ಯಲಗುದ್ರಿ, ಆಶಾ ಪ್ರಭು, ಹರ್ಷೆಂದ್ರ ಜೈನ್ ಹಾಗೂ ಕರ್ನಾಟಕ ಜೈನ ಅಸೋಷಿಯೇಶನ್ ಪದಾಧಿಕಾರಿಗಳು, ಆಶೀಶ್ ನೇಹಾ ಜೈನ್ ಉಪಸ್ಥಿತರಿದ್ದರು.