ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಚಿವ ರಿಜ್ವಾನ್ ಅರ್ಷದ್

Contributed bybeeresha.mahadeva@timesgroup.com|Vijaya Karnataka
minister rizwan arshad receives blessings from suttur seer
ಸುತ್ತೂರು ಶ್ರೀ ಆಶೀರ್ವಾದ ಪಡೆದ ಸಚಿವ ರಿಜ್ವಾನ್ ಅರ್ಷದ್

ವಿಕ ಸುದ್ದಿಲೋಕ ಮೈಸೂರು
ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಮಂಗಳವಾರ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು.

ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಆಗಮಿಸಿ, ಶ್ರೀಗಳಿಗೆ ಫಲತಾಂಬೂಲ ನೀಡಿ ಆಶೀರ್ವಾದ ಪಡೆದ ನಂತರ ಸುಮಾರು ಅರ್ಧ ಗಂಟೆ ಅವರೊಂದಿಗೆ ಚರ್ಚಿಸಿದರು.

ಇದಕ್ಕೂ ಮುನ್ನ ಸಂತ ಫಿಲೊಮಿನಾ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ನಾಯಕತ್ವ, ರಾಜಕಾರಣ, ರಾಜ್ಯದ ಅಭಿವೃದ್ಧಿಗೆ ನೂತನ ಸಚಿವರು ಹಮ್ಮಿಕೊಂಡಿರುವ ಕಾರ್ಯಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಚಿವರಿಂದ ಉತ್ತರ ಪಡೆದರು.

ಸಚಿವ ರಿಜ್ವಾನ್ ಅವರು ತಮಗೆ ಕಾಲೇಜಿನೊಟ್ಟಿಗೆ ಇರುವ ಒಡನಾಟ, ಮೈಸೂರಿನಲ್ಲಿತಾವು ಕಳೆದ ಬಾಲ್ಯದ ದಿನಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಮಾಧ್ಯಮದವರೊಂದಿಗೆ ಮಾತನಾಡಿ, ‘‘ಜನರ ವಿಶ್ವಾಸದಿಂದ ನನಗೆ ಸಚಿವ ಸ್ಥಾನ ದೊರೆತಿದೆ. ಇದನ್ನು ಬಳಕೆ ಮಾಡಿಕೊಂಡು ಅವರ ಋುಣ ತೀರಿಸುವ ಕೆಲಸ ಮಾಡುತ್ತೇನೆ,’’ ಎಂದು ಸಚಿವ ರಿಜ್ವಾನ್ ಅರ್ಷದ್ ಭರವಸೆ ನೀಡಿದರು.