ವಿಕ ಸುದ್ದಿಲೋಕ ಕೊಪ್ಪಳನಗರದ ಜೆಎಂಎಫ್ ಸಿ ನ್ಯಾಯಾಲಯದ ಹಳೆಯ ಕಟ್ಟಡದಲ್ಲಿಮಂಗಳವಾರ ಚಾವಣಿ ಭಾಗ ಕುಸಿದು, ಇಬ್ಬರು ವಕೀಲರು ಗಾಯಗೊಂಡಿದ್ದಾರೆ .
ನ್ಯಾಯಾಲಯದಲ್ಲಿವಕೀಲರು ತಮ್ಮ ಕೆಲಸದಲ್ಲಿತೊಡಗಿದ್ದ ವೇಳೆ ಏಕಾಏಕಿ ಚಾವಣಿಯ ಸಿಮೆಂಟ್ ಭಾಗ ವಕೀಲರ ತಲೆ ಮೇಲೆ ಕಿತ್ತು ಬಿದ್ದಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೊಪ್ಪಳದ ಜೆಎಂಎಫ್ ಸಿ ನ್ಯಾಯಾಲಯದ ಕಟ್ಟಡ ಹಳೆಯದಾಗಿದ್ದು, ಚಾವಣಿ ಸೇರಿ ಕಟ್ಟಡದ ಹಲವು ಭಾಗಗಳು ಶಿಥಿಲಾವಸ್ಥೆಯಲ್ಲಿವೆ ಎನ್ನಲಾಗಿದೆ. ಚಾವಣಿಯ ಸಿಮೆಂಟ್ ಪದರ ಆಗಾಗ ಕಿತ್ತು ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನ್ಯಾಯಾಲಯದ ಕಟ್ಟಡದಲ್ಲಿವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರು ನಿತ್ಯ ಓಡಾಡುತ್ತಿದ್ದು, ಕಟ್ಟಡದ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಶಿಥಿಲಗೊಂಡಿರುವ ಕಟ್ಟಡ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಹಾಗೂ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
---
1 ಕೆಪಿಎಲ್ 1
ಕೊಪ್ಪಳದ ಜೆಎಂಎಫ್ ಸಿ ನ್ಯಾಯಾಲಯದ ಹಳೆಯ ಕಟ್ಟಡದಲ್ಲಿಚಾವಣಿ ಕುಸಿದಿರುವುದು.