ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ವ್ಯಾಪಾರಿ ದಿನವನ್ನು ನಾನಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ನರೇಂದ್ರನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ವ್ಯಾಪಾರಿ ಐಕ್ಯತೆಯನ್ನು ಎತ್ತಿಹಿಡಿದು ಬದಿಯಡ್ಕ ಪಟ್ಟಣದಲ್ಲಿಮೆರವಣಿಗೆ ನಡೆಯಿತು.ಬಳಿಕ ನಡೆದ ವ್ಯಾಪಾರಿ ಸಂಗಮ ಕಾರ್ಯಕ್ರಮವನ್ನು ್ಲಬದಿಯಡ್ಕ ಸಿ.ಐ.ಅನೂಪ್ ಕೃಷ್ಣ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ನರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕಾರ್ಯದರ್ಶಿ ಕುಂಜಾರ್ ಮೊಹಮ್ಮದ್ ಮುಖ್ಯ ಭಾಷಣ ಮಾಡಿದರು.
ಮಾಜಿ ಅಧ್ಯಕ್ಷ ಎಸ್ .ಎನ್ . ಮಯ್ಯ, ಉಪಾಧ್ಯಕ್ಷ ರಾಜು ಸ್ಟೀಫನ್ ಹಾಗೂ ಹಮೀದ್ ಬಾರಕ್ , ಕಾರ್ಯದರ್ಶಿಗಳಾದ ಉದಯಶಂಕರ್ , ಅಖಿಲೇಶ್ ನಗುಮುಗಂ,ವಿಶ್ವನಾಥನ್ ಹಾಗೂ ರತ್ನಾಕರ ಓಡಂಕಲ್ ,ಮಹಿಳಾ ವಿಭಾಗದ ಮುಖಂಡರಾದ ಜಯಂತಿ ಚೇಟ್ಟಿಯಾರ್ ಹಾಗೂ ಕೃಪಾ, ಯುವ ವಿಭಾಗದ ಜಿಲ್ಲಾ ಕಾರ್ಯದರ್ಶಿ ಶಾಹಿದ್ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿದರು. ಖಜಾಂಚಿ ಜ್ಞಾನ ದೇವ ಶೆಣೈ ವಂದಿಸಿದರು.
ಹಿರಿಯ ವ್ಯಾಪಾರಿಗಳನ್ನು ಸನ್ಮಾನಿಸಲಾಯಿತು.ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿಉತ್ತಮ ಸಾಧನೆ ಮಾಡಿದ ವ್ಯಾಪಾರಿಗಳ ಮಕ್ಕಳು ಮತ್ತು ವ್ಯಾಪಾರಿ ಸಂಸ್ಥೆಗಳಲ್ಲಿಕೆಲಸ ಮಾಡುವವರ ಮಕ್ಕಳನ್ನು ಅಭಿನಂದಿಸಲಾಯಿತು.