ಮಹಿಳಾ ಕಾಂಗ್ರೆಸ್ ಗೆ ನೇಮಕಶಿಗ್ಗಾವಿ: ಹಾವೇರಿ ಜಿಲ್ಲಾಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಶಿಗ್ಗಾವಿ ಪುರಸಭೆ ಮಾಜಿ ಸದಸ್ಯೆ, ನ್ಯಾಯವಾದಿ ವಸಂತಾ ಬಾಗೂರ ಅವರನ್ನು ನೇಮಕ ಮಾಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯರೆಡ್ಡಿ ಆದೇಶಿಸಿದ್ದಾರೆ.
10 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದ ಬಾಗೂರ, ಬಾಗಲಕೋಟೆ ಉಪ ಚುನಾವಣೆಯಲ್ಲಿಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿಗುರುತಿಸಿಕೊಂಡು ಸಂಘಟನೆ ಮಾಡಿ ವರಿಷ್ಠರ ವಿಶ್ವಾಸಗಳಿಸಿದ್ದರು. ಈಗ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದರಿಂದ ಸ್ಥಳೀಯ ಯುವ ಕಾರ್ಯಕರ್ತರಲ್ಲಿಸಂಸತ ತಂದಿದೆ.