ಮೇಷ : ಮನೆಯ ಸಡಗರದ ವಾತಾವರಣದಲ್ಲಿಸಂಪೂರ್ಣವಾಗಿ ಭಾಗಿಯಾಗಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಜೀವನ ಶೈಲಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಸಮಯ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಸಿರು)
---------
ವೃಷಭ : ಗಣ್ಯರ ಭೇಟಿಯಿಂದ ಉಂಟಾದ ಕೆಲವು ಘಟನೆಗಳಿಂದ ಸಹಚರರಲ್ಲಿಭಿನ್ನಾಭಿಪ್ರಾಯ ಮೂಡಲಿದೆ. ನಿಮಗಿರುವ ಉತ್ತಮ ಹೆಸರಿಗೆ ಕೇಡನ್ನು ಬಯಸುವವರು ಎದುರಾಗುವರು. ವೈಯಕ್ತಿಕ ವಿಷಯಗಳ ಬಗ್ಗೆ ನಿಗಾವಹಿಸಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೆಂಪು)
---------
ಮಿಥುನ : ಕೆಲಸದಲ್ಲಿಅಪ್ರಾಮಾಣಿಕತೆ ಮತ್ತು ದುಡುಕಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ ಹೆಚ್ಚಾಗಲಿದೆ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಳದಿ)
-----------
ಕಟಕ : ಈ ದಿನದ ಸಂದಿಗ್ಧ ಪರಿಸ್ಥಿತಿಯಲ್ಲಿನೀವು ಸಮಸ್ಯೆಗಳನ್ನು ಮಾರ್ಗದರ್ಶಕರ ಮಾತಿನಂತೆ ಬಗೆಹರಿಸಿಕೊಳ್ಳುವುದು ಉತ್ತಮ. ನಿಮ್ಮ ಸಾಹಸ ಪ್ರವೃತ್ತಿ ಜನಮಾನಸದಲ್ಲಿಸ್ಥಾನವನ್ನು ಪಡೆದುಕೊಳ್ಳುತ್ತದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಪ್ಪು)
-------------
ಸಿಂಹ : ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿಹೇಳಿಕೊಳ್ಳಬೇಕಾದ ಸಂದರ್ಭ ಎದುರಾಗುವುದು. ಆದರೆ ಎಲ್ಲವನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಿ. ಕೆಲವೊಮ್ಮೆ ಇದರಿಂದಾಗಿ ನಿಮ್ಮ ವರ್ಚಸ್ಸು ಕಳೆಗುಂದುವುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬಿಳಿ)
----------
ಕನ್ಯಾ : ಖಾದಿ ಉದ್ಯಮದವರಿಗೆ ಸರಕಾರದಿಂದ ಸಹಾಯ ದೊರೆಯುವ ಅವಕಾಶಗಳಿವೆ. ಕೃಷಿ ಉತ್ಪನ್ನಗಳ ಬೆಲೆ ಏರುವುದರಿಂದ ನೀವು ಮಾಡಿದ್ದ ಸಾಲವನ್ನು ತೀರಿಸಿಕೊಳ್ಳುವ ಸದಾವಕಾಶ ಒದಗುವುದು.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ನೀಲಿ)
------------
ತುಲಾ : ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಪೌಷ್ಟಿಕವಾದ ಆಹಾರ ಸೇವನೆ ಮತ್ತು ಕಡಿಮೆ ಕೆಲಸ ಮಾಡಬೇಕಾಗುವುದು. ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)
-----
ವೃಶ್ಚಿಕ : ಅಧಿಕವಾದ ಖರ್ಚು-ವೆಚ್ಚಗಳಿಂದ ಮುಕ್ತಿ ಹೊಂದುವ ಮತ್ತು ದುರಭ್ಯಾಸದಿಂದ ಹೊರ ಬರುವ ಯೋಚನೆಯನ್ನು ಮಾಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಮನೆಯವರಿಗೆಲ್ಲಸಮಾಧಾನ ತರುವುದು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಗುಲಾಬಿ)
-----------
ಧನು : ಕೆಲಸದ ಸ್ಥಳದಲ್ಲಿನಿಮ್ಮ ಅಧಿಕಾರಿಗಳ ನಿಯಂತ್ರಣದಲ್ಲಿಯೇ ಎಲ್ಲವೂ ಇರುವುದು. ಕಾಫಿ, ಮೆಣಸು ಮಾರಾಟಗಾರರಿಗೆ ಲಾಭ. ತಂದೆ ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕೇಸರಿ)
-----------
ಮಕರ : ಸ್ನೇಹಿತರ ಅಥವಾ ಕುಟುಂಬದವರ ಸಲಹೆಯಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ರಾಜಿಯಾಗುವ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಹೊಸ ಕ್ಷೇತ್ರದಲ್ಲಿಏಳಿಗೆ ಪಡೆಯುವಿರಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಸಿರು ಪಾಚಿ)
---------
ಕುಂಭ : ಏಕಾಗ್ರತೆ ಮತ್ತು ಧ್ಯಾನದಿಂದ ಮಾನಸಿಕವಾಗಿ ಸದೃಢರಾಗುವಿರಿ. ಬಡಗಿ ಕೆಲಸ ಮಾಡುವರಿಗೆ ಸುಯೋಗವಿದೆ. ಶ್ರೀ ಈಶ್ವರನ ಕೃಪೆಯಿಂದ ಆರ್ಥಿಕ ಸ್ಥಿತಿಗತಿ ಇನ್ನಷ್ಟು ಉತ್ತಮಗೊಳ್ಳಲಿದೆ.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಸುವರ್ಣ)
---------
ಮೀನ : ಪ್ರೀತಿಪಾತ್ರರೊಂದಿಗೆ ಕಳೆಯುವ ಸಮಯವು ಲವಲವಿಕೆಯನ್ನು ಮೂಡಿಸುತ್ತದೆ. ಬಹಳ ಕಾಲದಿಂದ ಅಪೇಕ್ಷಿಸಿದ್ದ ವಸ್ತುವೊಂದು ಅಲ್ಪ ಶ್ರಮದಿಂದ ದೊರೆಕಲಿದೆ. ಷೇರು ವ್ಯವಹಾರಗಳಿಂದ ಲಾಭ ಪಡೆಯಬಹುದು.