ಬರಪೀಡಿತ ಘೋಷಣೆಗೆ ಮಲಪ್ರಭಾ ಮಹದಾಯಿ ರೈತ ಹೋರಾಟ ಸಮಿತಿ ಒತ್ತಾಯ ನವಲಗುಂದ ರೈತರಿಗೆ ಅನ್ಯಾಯ: ಆರೋಪ
ವಿಕ ಸುದ್ದಿಲೋಕ ನವಲಗುಂದ
ಮುಂಗಾರು ಹಂಗಾಮಿನಲ್ಲಿತಾಲೂಕಿನಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ರೈತರು ಸಂಕಷÜ್ಟದಲ್ಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್ .ಎಚ್ .ಕೋನರಡ್ಡಿ ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ಸರಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದೇ ರೈತರಿಗೆ ಅನ್ಯಾಯ ಮಾಡಿದೆ ಎಂದು ಮಲಪ್ರಭಾ ಮಹದಾಯಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.
ಮಂಗಳವಾರ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ವತಿಯಿಂದ ತಹಸೀಲ್ದಾರ್ ಸುಧೀರ್ ಸಾಹುಕಾರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೂಡಲೇ ನವಲಗುಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಪ್ರತಿ ಹೆಕ್ಟೆರ್ ಗೆ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಸೆ.8ರೊಳಗಾಗಿ ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಘುನಾಥ ನಡುವಿನಮನಿ, ಧರ್ಮಪ್ಪ ಶಲವಡಿ, ಡಿ.ಎಸ್ .ಗುಡಿಸಾಗರ, ಪಿ.ಡಿ.ಚೆನ್ನಪ್ಪಗೌಡ್ರ, ಆರ್ .ಆರ್ .ಹಲಗತ್ತಿ, ಎಸ್ .ಬಿ.ಚಿಕ್ಕನರಗುಂದ, ಸಿದ್ದು ಪೂಜಾರ, ಫಕೀರಗೌಡ ವೆಂಕನಗೌಡ್ರ, ಶಿದ್ದಪ್ಪ ಕಂಬಳಿ, ಭರಮಪ್ಪ ಕಾತರಕಿ, ಸಿದ್ದಪ್ಪ ಕೊಳಲಿನ, ಎಚ್ .ಬಿ.ಶಲವಡಿ, ಡಿ.ಎಸ್ .ಮಾಸ್ತಿ, ಸುಭಾಸ್ ವಗ್ಗರ ಸೇರಿ ನೂರಾರು ರೈತರು ಉಪಸ್ಥಿತರಿದ್ದರು.
ಪೊಟೊ-2-ಎನ್ ವಿಎಲ್ -2
ನವಲಗುಂದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.