ಜೈವಿಕ ಇಂಧನ ಸಸ್ಯಗಳಲ್ಲಿನಾನಾ ಔಷಧೀಯ ಗುಣಗಳೂ ಇವೆ

Contributed bypuru.dpete1987@gmail.com|Vijaya Karnataka
importance of medicinal properties of biofuel plants
-ವಿಜ್ಞಾನಿ ಡಾ.ನರೇಶ್ .ಎನ್ .ಟಿ. ಮಾಹಿತಿ | ವಿಶ್ವ ಜೈವಿಕ ಇಂಧನ ದಿನಾಚರಣೆ

ವಿಕ ಸುದ್ದಿಲೋಕ ಚಾಮರಾಜನಗರ
ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಸಾಮಾಜಿಕ ಅರಣ್ಯ ಇಲಾಖೆ, ಜಿಲ್ಲಾಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿಹರದನಹಳ್ಳಿ ಫಾರಂನಲ್ಲಿವಿಶ್ವ ಜೈವಿಕ ಇಂಧನ ದಿನಾಚರಣೆ ನಡೆಯಿತು.

ಜಿಲ್ಲಾಪಂಚಾಯಿತಿ ಸಿಇಒ ಮೋನಾ ರೋತ್ ಅವರು ಹೊಂಗೆ ಸಸಿ ನೆಡುವುದರ ಜತೆಗೆ ಟ್ರ್ಯಾಕ್ಟರ್ ಗೆ ಜೈವಿಕ ಇಂಧನ ತುಂಬಿಸಿ ವಾಹನ ಚಾಲನೆಗೆ ಹಸಿರು ನಿಶಾನೆ ತೋರುವ ಮೂಲಕ ಕಾರ ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ , ಜೈವಿಕ ಇಂಧನ ಸಸಿಗಳು ಮತ್ತು ಇತರೆ ಅರಣ್ಯ ಸಸಿಗಳ ಉಪಯೋಗದ ಕುರಿತು ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ನರೇಶ್ .ಎನ್ .ಟಿ. ಮಾತನಾಡಿ, ‘‘ಜೈವಿಕ ಇಂಧನ ಸಸ್ಯಗಳನ್ನು ರೈತರು ಅಳವಡಿಸಿಕೊಳ್ಳುವುದರಿಂದ ರೈತರು ಕೃಷಿ ವ್ಯವಸ್ಥೆಯಲ್ಲಿಸಸ್ಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವುದರ ಜತೆಗೆ ಹವಾಮಾನ ವೈಪರೀತ್ಯಕ್ಕೆ ಪೆಟ್ರೋಲಿಯಂ ಇಂಧನದ ವಿವೇಚನ ರಹಿತ ಬಳಕೆ ಕಾರಣವಾಗಿದೆ. ಜೈವಿಕ ಇಂಧನ ಹಲವು ಕೈಗಾರಿಕೆಗಳಿಗೆ ಮತ್ತು ಕೆಲವು ವಾಹನಗಳಿಗೆ ಒಂದು ಉತ್ತಮವಾದ ಪರ್ಯಾಯ ಇಂಧನವಾಗಿದೆ. ಜನರಿಗೆ ಇದರ ಅರಿವು ಅವಶ್ಯ. ಜೈವಿಕ ಇಂಧನ ಸಸ್ಯಗಳಲ್ಲಿನಾನಾ ಔಷಧೀಯ ಗುಣಗಳು ಹೊಂದಿದ್ದು, ಇವುಗಳ ಬಳಕೆ ಮಾನವನ ಆರೋಗ್ಯ ನಿರ್ವಹಣೆಯಲ್ಲೂಸಹಕಾರಿಯಾಗುತ್ತದೆ,’’ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿಕೇಂದ್ರದ ಆವರಣದಲ್ಲಿಕಾರ ್ಯಕ್ರಮದ ನಿಮಿತ್ತ ಕಿಸಾನ್ ಸಮೃದ್ಧಿ ತಾಂತ್ರಿಕ ಜೈವಿಕ ಉತ್ಪನ್ನಗಳಾದ ಹೊಂಗೆ ಹಿಂಡಿ, ಬೇವಿನ ಹಿಂಡಿ, ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಬಯೋ ಡೀಸೆಲ್ , ಉಪ ಉತ್ಪನ್ನಗಳಾದ ದೀಪದ ಎಣ್ಣೆ, ಜೈವಿಕ ಸಾಬೂನು ಹಾಗೂ ಜೈವಿಕ ಇಂಧನ ಸಸ್ಯಗಳನ್ನು ಪ್ರದರ್ಶಿಸಲಾಯಿತು.

ಕಾರ ್ಯಕ್ರಮದಲ್ಲಿಜೈವಿಕ ಇಂಧನ ಪ್ರಾತ್ಯಕ್ಷಿಕೆ ಘಟಕದ ಯೋಜನಾ ಸಹಾಯಕಿ ಅನನ್ಯ, ಡಾ.ಬಿ.ಪಂಪನಗೌಡ, ಡಾ.ಶಶಿಕುಮಾರ್ , ಕೇಂದ್ರದ ಗೃಹ ವಿಜ್ಞಾನಿ ಡಾ.ದೀಪಾ.ಜೆ. ಮಂಜು ಸೇರಿದಂತೆ ರೈತರು ಹಾಜರಿದ್ದರು.

ಸಿಎಚ್ ಎನ್ 31ಎಸ್ ಎಂಆರ್ 4

ಚಾಮರಾಜನಗರದ ಹರದನಹಳ್ಳಿ ಫಾರಂನಲ್ಲಿನಡೆದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ ್ಯಕ್ರಮಕ್ಕೆ ಜಿ.ಪಂ. ಸಿಇಒ ಮೋನಾ ರೋತ್ ಅವರು ಹೊಂಗೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.